Saturday, December 14, 2019 11:18 AM

ಪ್ರಕೃತಿ ಸೊಬಗಿನ ನಡುವೆ ಇರುವ ಸಾತೋಡಿ ಹಾಗೂ ಮಾಗೋಡು ಜಲಪಾತಗಳು
757
ಪ್ರಕೃತಿ ಸೊಬಗಿನ ನಡುವೆ ಇರುವ ಸಾತೋಡಿ ಹಾಗೂ ಮಾಗೋಡು ಜಲಪಾತಗಳು

ಸಾತೊಡ್ಡಿ ಎಂತಲೂ ಬರೆಯಲ್ಪಡುವ/ಕರೆಯಲ್ಪಡುವ ಈ ಜಲಪಾತ ಕೇಂದ್ರವು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಇದನ್ನು ಒಮ್ಮೊಮ್ಮೆ ಪ್ರೀತಿಯಿಂದ “ಮಿನಿ ನಯಾಗ್ರಾ” ಜಲಪಾತ ಎಂತಲೂ ಕರೆಯಲಾಗುತ್ತದೆ.
ಈ ಜಲಪಾತ ಅಷ್ಟೊಂದೇನೂ ಎತ್ತರವಾಗಿಲ್ಲ. ಇದರ ಎತ್ತರ ಹದಿನೈದು ಮೀಟರ್. ಅಂದರೆ ಸುಮಾರು 49.2 ಅಡಿಗಳಷ್ಟು ಮಾತ್ರವೆ. ಆದರೆ, ಇದು ಸಾಕಷ್ಟು ಅಗಲವಾಗಿರುವುದರಿಂದ ಇದನ್ನು ಮಿನಿ ಅಥವಾ ಚಿಕ್ಕ ನಯಾಗ್ರಾ ಜಲಪಾತ ಎಂಬ ಹೆಸರಿನಿಂದಲೂ ಸಂಭೋದಿಸುತ್ತಾರೆ.
ಸಾತೋಡಿ ಜಲಪಾತವಿರುವುದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಿಯಲ್ಲಿ. ಯಲ್ಲಾಪುರದಿಂದ ಸುಮಾರು 32 ಕಿ.ಮಿ ಗಳಷ್ಟು ದೂರದಲ್ಲಿ ಈ ಜಲಪಾತ ಕೇಂದ್ರವಿದೆ.
ನೀವು ಈ ಜಲಪಾತಕ್ಕೆ ಭೇಟಿ ನೀಡಬೇಕಿದ್ದಲ್ಲಿ ಮೊದಲಿಗೆ ಯಲ್ಲಾಪುರಕ್ಕೆ ತೆರಳಿ ನಂತರ ಅಲ್ಲಿಂದ ಬಾಡಿಗೆ ಆಟೋ ಅಥವಾ ಕಾರುಗಳನ್ನು ಮಾಡಿಕೊಂಡು ಹೊರಡುವುದು ಉತ್ತಮ. ಏಕೆಂದರೆ ಸಾತೋಡಿವರೆಗೆ ಯಾವುದೆ ಬಸ್ಸುಗಳು ದೊರೆಯುವುದಿಲ್ಲ. ನಿಮ್ಮ ಸ್ವಂತ ವಾಹನವಿದ್ದಲ್ಲಿ ಇನ್ನೂ ಅನುಕೂಲ.
ಯಲ್ಲಾಪುರದ ಮುಖ್ಯ ರಸ್ತೆಯಿಂದ ತಿರುವು ಪಡೆದು ಸಾತೋಡಿಯೆಡೆ ತೆರಳಬೇಕು. ಮಾಹಿತಿ ಫಲಕವಿರುವ ಕಾರಣ ಸಾಗುವುದು ಸರಳವಾಗುತ್ತದೆ. ಅಲ್ಲದೆ ಸ್ಥಳೀಯವಾಗಿಯೂ ವಿಚಾರಿಸಿ ಮುಂದೆ ಹೊರಡಬಹುದು.
ಸಾತೋಡಿ ಜಲಪಾತವು ರಮಣೀಯ ಪ್ರಕೃತಿ ಸೊಬಗಿನ ಮಧ್ಯದಲ್ಲಿ ಜಲಮೂಲವೊಂದರಿಂದ ಉಂಟಾಗಿದ್ದು ಪ್ರಕೃತಿಪ್ರಿಯ ಪ್ರವಾಸಿಗರು ಇಲ್ಲಿ ಆನಂದಮಯ ಸಮಯ ಕಳೆಯಬಹುದು. ಈ ಜಲಪಾತದ ಬಳಿ ತಂಗಲು ಕಾಟೆಜುಗಳು, ಹೋಟೆಲ್ ಲಭ್ಯ. ಆದರೆ ಮುಂಚಿತವಾಗೆ ಕ್ಜಾಯ್ದಿರಿಸಿ ಹೊರಡುವುದು ಉತ್ತಮ. ಸಾತೋಡಿ ಬಳಿಯಿರುವ ಒಂದು ಹೋಟೆಲ್.
ಸಾತೋಡಿಯ ಜಲಪಾತದಿಂದ ಧುಮುಕುವ ನೀರು ಮುಂದೆ ಸಾಗುತ್ತ ಕೊಡಸಳ್ಳಿ ಜಲಾಶಯದಲ್ಲಿ ಸಮ್ಗ್ರಹವಾಗುತ್ತದೆ ಹಾಗೂ ಆ ನಂತರ ಕಾಳಿ ನದಿಯಲ್ಲಿ ಸೇರ್ಪಡೆಗೊಳ್ಳುತ್ತದೆ. ಕೊಡಸಳ್ಳಿ ಆಣೆಕಟ್ಟಿನ ಹಿನ್ನೀರು.
ಕೊಡಸಳ್ಳಿ ಆಣೆಕಟ್ಟನ್ನು ಕರ್ನಾಟಕ ಪಾವರ್ ಕಾರ್ಪೋರೇಷನ್ ಲಿಮಿಟೆಡ್ (ಕೆಪಿಸಿಎಲ್) ನಿಂದ ನಿರ್ಮಾಣ ಮಾಡಲಾಗಿದ್ದು ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದೊಂದು ಜಲೋತ್ಪನ್ನ ಆಣೆಕಟ್ಟಾಗಿದೆ.
ಸಾತೋಡಿ ಜಲಪಾತದ ವಿಶೇಷವೆಂದರೆ ಇದರ ಬುಡದವರೆಗೂ ಇಳಿಯಬಹುದಾಗಿದ್ದು ಇದರ ಅಂದ ಚೆಂದವನ್ನು ಬಹು ಹತ್ತಿರದಿಂದ ಆಸ್ವಾದಿಸಬಹುದು.
ಮಳೆಗಾಲದ ಸಮಯದಲ್ಲಿ ಇದು ಮೈದುಂಬಿ ಹರಿಯುವುದರೊಂದಿಗೆ ಸುತ್ತಲಿನ ಪರಿಸರವೂ ಸಹ ಸಾಕಷ್ಟು ಹಸಿರುಮಯವಾಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ಜಲಪಾತ ತಾಣಕ್ಕೆ ಭೇಟಿ ನೀಡಲಾರಂಭಿಸುತ್ತಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್