Tuesday, December 10, 2019 7:20 AM

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಸೈನ್ಸ್ ಪಾಕ್೯ ಪ್ರಾರಂಭ
145
ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಸೈನ್ಸ್ ಪಾಕ್೯ ಪ್ರಾರಂಭ

ಮಡಿಕೇರಿ ಆ.೩ : ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ನೂತನವಾಗಿ ನಿಮಿ೯ಸಲಾದ ಸೈನ್ಸ್ ಪಾಕ್೯ನ್ನು ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿದೇ೯ಶಕ ಪಿ.ಎಸ್. ಮಚ್ಚಾಡೋ ಉದ್ಘಾಟಿಸಿದರು.

ಈ ಸಂದಭ೯ ಮಾತನಾಡಿದ ಮಚ್ಚಾಡೋ, ವಿದ್ಯಾಥಿ೯ಗಳು ತಮ್ಮ ಮನಸ್ಸಿನಲ್ಲಿ ಮೂಡುವ ಸಂಶಯಗಳಿಗೆ ತರಗತಿಗಳಲ್ಲಿ ಶಿಕ್ಷಕರೊಂದಿಗೆ ಮಾತನಾಡಿ ಉತ್ತರ ಕಂಡುಕೊಳ್ಳಬೇಕು. ವಿದ್ಯಾಥಿ೯ಗಳಿಂದ ಹೆಚ್ಚು ಹೆಚ್ಚು ಪ್ರಶ್ನೆಗಳು ಮೂಡಿಬರಬೇಕು. ಇಂಥ ಪ್ರಶ್ನೆಗಳೇ ಹೊಸ ಅವಿಷ್ಟಾರಗಳಿಗೆ ಕಾರಣವಾಗುತ್ತದೆ ಎಂದರು. ಇಂದಿನ ಆಧುನಿಕ ದಿನಮಾನಗಳಲ್ಲಿ ನವನವೀನ ವಿಜ್ಞಾನ ಸಂಶೋಧನೆಯ ಬಗ್ಗೆಯೂ ವಿದ್ಯಾಥಿ೯ಗಳು ಅರಿತುಕೊಳ್ಳುವುದು ಮುಖ್ಯ ಎಂದೂ ಮಚ್ಚಾಡೋ ಹೇಳಿದರು. ಕೊಡಗಿನ ಖಾಸಗಿ ಶಾಲೆಯೊಂದರಲ್ಲಿ ಪ್ರಥಮ ಬಾರಿಗೆ ಸೈನ್ಸ್ ಪಾಕ್೯ ಪ್ರಾರಂಭವಾಗಿರುವುದು ಉತ್ತಮ ಬೆಳವಣಿಗೆ ಎಂದೂ ಮಚ್ಚಾಡೋ ಪ್ರಶಂಶಿಸಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬಿ.ಕೆ.ಸುಬ್ಬಯ್ಯ ಶಾಲೆಯಲ್ಲಿ ನಿಮಿ೯ಸಲಾದ ಚಿಗುರು ಹೆಸರಿನ ನೂತನ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿ, ತಮ್ಮ ಸಂಸ್ಥೆಯು ಸಕಾ೯ರದ ಹೊಸ ಶಿಕ್ಷಣ ನೀತಿಯನ್ನು ಅನುಸರಿಸಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡು ಕಾಯ೯ನಿವ೯ಹಿಸುತ್ತಿದೆ ಎಂದರು.ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಜಿಲ್ಲಾಧ್ಯಕ್ಷ ಕೆ.ಎಸ್.ದೇವಯ್ಯ ಸೈನ್ಸ್ ಪಾಕ್೯ನಂಥ ವಿನೂತನ ಯೋಜನೆ ಶಾಲೆಯಲ್ಲಿ ಕಾಯಾ೯ರಂಭ ಮಾಡಿದ್ದು ಶ್ಲಾಘನೀಯ ಎಂದರು.

ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಕಾಯ೯ದಶಿ೯ ಬಾಲಾಜಿ ಕಶ್ಯಪ್, ಶಾಲಾ ಆಡಳಿತ ಮಂಡಳಿ ಸದಸ್ಯೆ ಶಾರದಾ ಮಂದಪ್ಪ, ಶಾಲೆಯ ಮುಖ್ಯಕಾಯ೯ನಿವ೯ಹಣಾಧಿಕಾರಿ ವಿದ್ಯಾಹರೀಶ್, ಉಪಪ್ರಾಂಶುಪಾಲೆ ವನಿತಾ, ವ್ಯವಸ್ಥಾಪಕ ರವಿ ವೇದಿಕೆಯಲ್ಲಿದ್ದರು. ಶಾಲಾ ವಿದ್ಯಾಥಿ೯ಗಳು, ಶಿಕ್ಷಕ ವಗ೯ ಕಾಯ೯ಕ್ರಮದಲ್ಲಿ ಪಾಲ್ಗೊಂಡಿತ್ತು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್