Tuesday, December 10, 2019 8:36 AM

ಕಾರ್ಯಪ್ಪ ಕಾಲೇಜಿನಲ್ಲಿ ರೋಟರ್ಯಾಕ್ಟ್ ಸದಸ್ಯರಿಂದ ವನಮಹೋತ್ಸವ
95
ಕಾರ್ಯಪ್ಪ ಕಾಲೇಜಿನಲ್ಲಿ ರೋಟರ್ಯಾಕ್ಟ್ ಸದಸ್ಯರಿಂದ ವನಮಹೋತ್ಸವ

ಮಡಿಕೇರಿ ಆ. ೫ : ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ. ಎಂ ಕಾರ್ಯಪ್ಪ ಕಾಲೇಜಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಆಶ್ರಯದಲ್ಲಿ ರೋಟರ್ಯಾಕ್ಟ್ ಕ್ಲಬ್ ವತಿಯಿಂದ ವನಮಹೋತ್ಸವ ಜರುಗಿತು.

ಕಾಲೇಜಿನ ರೋಟರ್ಯಾಕ್ಟ್ ಸಂಚಾಲಕ ಡಾ.ಶ್ರೀಧರ ಹೆಗ್ಗಡೆ ಮಾತನಾಡಿ, ನೂತನ ಪ್ರಾಂಶುಪಾಲರಾದ ಜಗತ್ ತಿಮ್ಮಯ್ಯ ಅವರಿಂದ ಈ ಯೋಜನೆ ಪ್ರಾರಂಭವಾಗಿರುವುದು ವಿಶೇಷ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಜಗತ್‌ತಿಮ್ಮಯ್ಯ ಮಾತನಾಡಿ, ’ಸಸಿಗಳನ್ನು ನೆಡುವುದು ಮಾತ್ರವಲ್ಲ ಅದನ್ನು ಮರವಾಗಿ ಬೆಳೆಸುವಲ್ಲಿನ ಮಹತ್ವದ ಜವಾಬ್ದಾರಿಕೂಡ ನಿಮ್ಮದು ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್‌ಅಧ್ಯಕ್ಷ ಎಂ. ಆರ್. ಜಗದೀಶ್ ಸಸಿ ನೆಡುವ ಯೋಜನೆಗೆ ಚಾಲನೆ ನೀಡಿದರು. ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ಕಾಲೇಜಿನ ಉಪನ್ಯಾಸಕ ರವಿಶಂಕರ್, ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಶಾಹಿದ್ ಪಾಲ್ಗೊಂಡಿದ್ದರು.

ಈ ಸಂದರ್ಭ ವನಮಹೋತ್ಸವವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ವರ್ಷದ ಹಲವು ದಿನ ಹಸಿರೀಕರಣ ಯೋಜನೆಚಾಲ್ತಿಯಲ್ಲಿ ಇಡುವುದಾಗಿ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಕಾಲೇಜಿನ ರೋಟರ್ಯಾಕ್ಟ್ ಸದಸ್ಯರು ಪ್ರತಿಜ್ಞೆ ಸ್ವೀಕರಿಸಿದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್