Tuesday, December 10, 2019 8:21 AM

ಆಂಧ್ರ ಚಿಕನ್‌ ಮಸಾಲ ತಯಾರಿಸುವ ವಿಧಾನ
345
ಆಂಧ್ರ ಚಿಕನ್‌ ಮಸಾಲ ತಯಾರಿಸುವ ವಿಧಾನ

ಬೇಕಾಗುವ ಸಾಮಾಗ್ರಿಗಳು :

ಚಿಕನ್‌ 250 ಗ್ರಾಂ, ಈರುಳ್ಳಿ 1 ಕಪ್‌, ಬೆಳ್ಳುಳ್ಳಿ ಶುಂಠಿ ಪೇಸ್ಟ್‌ 1/2 ಚಮಚ, ಹಳದಿ ಪುಡಿ 1/4 ಚಮಚ, ಮೆಣಸಿನ ಹುಡಿ 1 ಚಮಚ, ಕೊತ್ತಂಬರಿ ಸೊಪ್ಪು 1 ಕಟ್ಟು, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 3ಚಮಚ, ತುಪ್ಪ 1 ಚಮಚ, ಗರಂ ಮಸಾಲ 1/2 ಚಮಚ, ಕರಿಮೆಣಸು 1/4 ಚಮಚ, ಲವಂಗ 1/2 ಚಮಚ, ಏಲಕ್ಕಿ 3, ದಾಲ್ಚಿನಿ 2, ಜೀರಿಗೆ  1/2 ಚಮಚ, ಮೆಂತೆ 1/2 ಚಮಚ, ಜಾಯಿಕಾಯಿ ಪುಡಿ 1/4 ಚಮಚ

ತಯಾರಿಸುವ ವಿಧಾನ :
ಚಿಕನ್‌ನ್ನು ಚೆನ್ನಾಗಿ ತೊಳೆದು ಮೀಡಿಯಮ್‌ ಗಾತ್ರದಲ್ಲಿ ಕತ್ತರಿಸಿ. ಅದಕ್ಕೆ ಹಳದಿ ಮತ್ತು ಉಪ್ಪು ಹಾಕಿ 15 ನಿಮಿಷಗಳ ಕಾಲ ಹಾಗೇ ಬಿಡಿ. ಒಂದು ಪಾತ್ರೆಗೆ ಎಣ್ಣೆ ಮತ್ತು ತುಪ್ಪ ಹಾಕಿ ಸ್ಟೌಮೇಲಿಟ್ಟು ಬಿಸಿ ಮಾಡಿ. ಇದಕ್ಕೆ ಜಿಂಜರ್‌ ಗಾರ್ಲಿಕ್‌ ಪೇಸ್ಟ್‌ ಹಾಕಿ ಅರ್ಧ ನಿಮಿಷ ಬಿಸಿ ಮಾಡಿ. ನಂತರ ಕತ್ತರಿಸಿದ ಈರುಳ್ಳಿ ಹಾಕಿ ನಸುಕಂದು ಬಣ್ಣಬರುವವರೆಗೆ ಫ್ರೈ ಮಾಡಿ. ಇದಕ್ಕೆ ಚಿಕನ್‌ ಹಾಕಿ ಮುಚ್ಚಿಟ್ಟು ಐದು ನಿಮಿಷಗಳ ಕಾಲ ಹಾಗೇ ಬೇಯಿಸಿ. ನಂತರ ಮುಚ್ಚಳ ತೆಗೆದು ಮತ್ತೆ ಚಿಕನ್‌ನ್ನು ಚೆನ್ನಾಗಿ ಬೇಯಿಸಿ. ನೀರು ಸರಿಯಾಗಿ ಆರುವಂತೆ ನೋಡಿಕೊಳ್ಳಿ. ಚಿಕನ್‌ ಸರಿಯಾಗಿ ಬೆಂದ ನಂತರ ಮೇಲೆ ಹೇಳಿದ ಎಲ್ಲಾ ತರಹದ ಮಸಾಲ ಪದಾರ್ಥಗಳನ್ನು, ಮೆಣಸಿನ ಹುಡಿ  ಹಾಕಿ ಮತ್ತೆ ಚೆನ್ನಾಗಿ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿ.
ಈ ಟೇಸ್ಟಿ ಆಂಧ್ರ ಚಿಕನ್‌ ಮಸಾಲವನ್ನು ಚಪಾತಿ ಅಥವಾ ರೈಸ್‌ ಜೊತೆ ಸರ್ವ್‌ ಮಾಡಿ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್