Tuesday, December 10, 2019 8:03 AM

ಜ್ಯೊತಿರ್-ಲಿಂಗ ಸ್ವರೂಪಿಯಾಗಿ ನೆಲೆಸಿರುವ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಾಲಯ
93
ಜ್ಯೊತಿರ್-ಲಿಂಗ ಸ್ವರೂಪಿಯಾಗಿ ನೆಲೆಸಿರುವ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಾಲಯ

ಕೊಲ್ಲೂರು
ಕುಂದಾಪುರದಿಂದ ಸುಮಾರು ೬೦ ಕಿಲೋಮೀಟರ್ ದೂರದಲ್ಲಿ ಪಶ್ಚಿಮ ಘಟ್ಟಗಳಲ್ಲಿರುವ ಕೊಡಚಾದ್ರಿ ಬೆಟ್ಟದ ಕಣಿವೆಯಲ್ಲಿ ಈ ಊರು ಇದೆ. ಸೌಪರ್ಣಿಕಾ ನದಿಯ ತೀರದಲ್ಲಿ ಜಗತ್ಪ್ರಸಿದ್ಧವಾದ ಮೂಕಾಂಬಿಕಾ ದೇವಾಲಯವಿದೆ. ಇಲ್ಲಿ ಮೂಕಾಂಬಿಕೆಯು ಶಿವ ಹಾಗೂ ಶಕ್ತಿಯ ಮಿಲನವಾಗಿ ಜ್ಯೊತಿರ್-ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾಳೆ.

ಇಲ್ಲಿನ್ ಶ್ರೀಚಕ್ರದಲ್ಲಿರುವ ಪಂಚಲೋಹದ ಚಿತ್ರವು ಇಲ್ಲಿಗೆ ಭೇಟಿ ನೀಡಿದ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಿತೆಂದು ಹೇಳುತ್ತಾರೆ. ಪಂಚಮುಖ ಗಣೇಶನ ವಿಗ್ರಹವು ಇಲ್ಲಿ ಕಾಣಸಿಗುತ್ತದೆ. ಕರ್ನಾಟಕದ ೭ ಪವಿತ್ರ ಸ್ಥಳಗಳಾದ (ಕೊಲ್ಲೂರು), ಉಡುಪಿ, ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ, ಶಂಕರನಾರಾಯಣ, ಗೋಕರ್ಣ ಇದೂ ಒಂದು. ಇಲ್ಲಿನೆ ಒಂದು ಕೋಣೆಯಲ್ಲಿ ಆದಿ ಶಂಕರಾಚಾರ್ಯರು ಧ್ಯಾನದಲ್ಲಿದ್ದಾಗ ಅವರ ಮುಂದೆ ಮೂಕಾಂಬಿಕೆಯು ಪ್ರತ್ಯಕ್ಷವಾದಗ ಅವರು ಮೂಕಾಂಬಿಕೆಯ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿದರು ಎಂದು ಇತಿಹಾಸವಿದೆ. ದೇವಿಯ ಮೇಲಿರುವ ಆಭರಣಗಳನ್ನು ಇಲ್ಲಿಯ ನಗರ ರಾಜರು ಹಾಗೂ ವಿಜಯನಗರದ ರಾಜರುಗಳು ಅರ್ಪಿಸಿದ್ದರು. ೧೮ನೇ ಶತಮಾನದಲ್ಲಿ ಮರಾಠರು ದಂಡಯಾತ್ರೆಗೆ ಇಲ್ಲಿ ಬಂದಾಗ ದೇವಿಯ ಆಭರಣಗಳನ್ನು ಕೊಳ್ಳೆ ಹೊಡೆದರು. ಮೂಕಾಂಬಿಕೆಯ ವಿಗ್ರಹಕ್ಕೆ ಸುಮಾರು ೧೨೦೦ ವರ್ಷಗಳ ಇತಿಹಾಸವಿದೆ. ರಾಣಿ ಚೆನ್ನಮ್ಮಾಜಿಯ ಆಜ್ಞೆಯ ಮೇರೆಗೆ ಇಲ್ಲಿಯ ತುಂಡರಸನಾದ ಹನಗಲ್ಲು ವೀರ ಸಂಗಯ್ಯ ಎಂಬಾತನು ಈ ದೇವಾಲಯದಲ್ಲಿರುವ ಕಲ್ಲಿನ ವಿಗ್ರಹವನ್ನು ಕಂಡುಹುಡಿಕಿದನು. ಕೊಲ್ಲೂರಿನ ಸಮೀಪದಲ್ಲೇ ಅರಸಿನ ಮಕ್ಕಿ ಹಾಗೂ ಗೋವಿಂದ ತೀರ್ಥ ಜಲಪಾತಗಳಿವೆ. ಕೊಡಚಾದ್ರಿ ಬೆಟ್ಟವು ಪರ್ವತಾರೋಹಿಗಳನ್ನು ಆಕರ್ಷಿಸುತ್ತದೆ. ಇಲ್ಲಿಂದ ಕಾಣಸಿಗುವ ಅರಬ್ಬೀ ಸಮುದ್ರದ ದೃಶ್ಯವು ಆನಂದದಾಯಕವಾಗಿದೆ.


ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್