Saturday, December 14, 2019 10:25 AM

ಭೀಕರ ರಸ್ತೆ ಅಪಘಾತದಲ್ಲಿ ಓರ್ವ ದುರ್ಮರಣ : ಮತ್ತೊಬ್ಬ ಗಂಭೀರ : ವಿರಾಜಪೇಟೆ ಸಮೀಪದ ಕಾಕೋಟು ಪರಂಬು ಬಳಿ ಘಟನೆ
85
ಭೀಕರ ರಸ್ತೆ ಅಪಘಾತದಲ್ಲಿ ಓರ್ವ ದುರ್ಮರಣ : ಮತ್ತೊಬ್ಬ ಗಂಭೀರ : ವಿರಾಜಪೇಟೆ ಸಮೀಪದ ಕಾಕೋಟು ಪರಂಬು ಬಳಿ ಘಟನೆ

ಮಡಿಕೇರಿ :

ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದ ಹಿರಿಯರಿಬ್ಬರಿಗೆ ಕಾರು ಡಿಕ್ಕಿಯಾದ ಪರಿಣಾಮ ಒಬ್ಬರು ಮೃತಪಟ್ಟು ಮತ್ತೊಬ್ಬರ ಕಾಲು ಮುರಿತಕ್ಕೊಳಗಾಗಿರುವ ಘಟನೆ ಸೋಮವಾರ ವೀರಾಜಪೇಟೆ ಬಳಿಯ ಕಾಕೋಟುಪರಂಬುವಿನಲ್ಲಿ ನಡೆದಿದೆ.
ಕಾಕೋಟುಪರಂಬು ರಸ್ತೆ ಬದಿಯಲ್ಲಿ ಮಂಡೇಪಂಡ ರವಿ ಮುತ್ತಪ್ಪ ಹಾಗೂ ಮಂಡೇಟಿರ ರಘು ಮುತ್ತಣ್ಣ ಎಂಬವರು ನಿಂತು ಮಾತನಾಡುತ್ತಿದ್ದಾಗ ವೀರಾಜಪೇಟೆ ಕಡೆಯಿಂದ ಬಂದ ಕೆ.ಎ.12 ಎಂ.ಎ.1258ರ ಕಾರು, ಚಾಲಕನ ನಿಯಂತ್ರಣ ತಪ್ಪಿ ಬದಿಯಲ್ಲಿ ನಿಂತಿದ್ದವರಿಗೆ ಡಿಕ್ಕಿಯಾಗಿ ಬಳಿಕ ಪಲ್ಟಿಯಾಗಿದೆ.
ಈ ಸಂದರ್ಭ ಸ್ಥಳೀಯರು ಗಾಯಾಳುಗಳನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ತಂದಾಗ ಮಂಡೇಪಂಡ ರವಿ ಮುತ್ತಪ್ಪ (66) ಆ ವೇಳೆಗಾಗಲೇ ದೃಢಪಟ್ಟಿತು. ಇನ್ನು ಮಂಡೇಟಿರ ರಘು ಮುತ್ತಣ್ಣ (66) ಅವರ ಕಾಲು ಮುರಿತಕ್ಕೊಳಗಾಗಿದ್ದು, ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವೀರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿ ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ತಿಳಿಸಿದ್ದಾರೆ. ಕಾರು ಚಾಲಕ ಬಿದ್ದಪ್ಪ ಅವರಿಗೂ ಗಾಯಗಳಾಗಿ ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಡೆಪಂಡ ಮುತ್ತಪ್ಪ (ರವಿ) 70 ಸ್ಥಳದಲ್ಲೇ ಸಾವು ಸಾವನ್ನಪ್ಪಿದ್ದು, ಮಂಡೆಟಿರ ಮುತ್ತಣ್ಣ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ದಾಖಲಿಸಲಾಗಿದೆ. ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಪಲ್ಟಿಹೊಡೆದಿದೆ ಎನ್ನಲಾಗಿದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್