Saturday, December 14, 2019 10:02 AM

ದಕ್ಷಿಣ ಕೊರಿಯಾದೊಂದಿಗೆ ಚರ್ಚೆ ನಡೆಸುವ ಪ್ರಶ್ನೆಯೇ ಇಲ್ಲ : ಉತ್ತರ ಕೊರಿಯಾ ಸ್ಪಷ್ಟನೆ
101
ದಕ್ಷಿಣ ಕೊರಿಯಾದೊಂದಿಗೆ ಚರ್ಚೆ ನಡೆಸುವ ಪ್ರಶ್ನೆಯೇ ಇಲ್ಲ : ಉತ್ತರ ಕೊರಿಯಾ ಸ್ಪಷ್ಟನೆ

ಸೋಲ್ : ಉತ್ತರ ಕೊರಿಯಾ ಮತ್ತೊಮ್ಮೆ ಶಸ್ತ್ರಾಸ್ತ್ರ ಪರೀಕ್ಷೆ ನಡೆಸಿದೆ. ತಮ್ಮ ನಾಯಕ ಕಿಮ್ ಜಾಂಗ್ ಉನ್ ಅವರೇ ಖುದ್ದು ಶನಿವಾರ ಹೊಸ ಶಸ್ತ್ರಾಸ್ತ್ರ ಪರೀಕ್ಷೆಗಳ ಅವಲೋಕನ ನಡೆಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ.
ಅಮೆರಿಕದೊಂದಿಗೆ ಜಂಟಿ ಸೇನಾ ಕವಾಯತು ನಡೆಸುತ್ತಿರುವ ದಕ್ಷಿಣ ಕೊರಿಯಾದೊಂದಿಗೆ ಇನ್ನು ಮುಂದೆ ಯಾವುದೇ ಮಾತುಕತೆ ಅಥವಾ ಚರ್ಚೆ ನಡೆಸುವ ಪ್ರಶ್ನೆಯೇ ಇಲ್ಲ. ಅದೇನಿದ್ದರೂ ಅಮೆರಿಕದೊಂದಿಗೆ ಮಾತ್ರ ಎಂದು ಉತ್ತರ ಕೊರಿಯಾ ಈ ವೇಳೆ ಸ್ಪಷ್ಟನೆ ನೀಡಿದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡುವೆ ನಡೆಯುತ್ತಿರುವ ಜಂಟಿ ಸೇನಾ ಅಭ್ಯಾಸಗಳು ಪೂರ್ಣಗೊಂಡ ನಂತರ ಪರಮಾಣು ನಿಶ್ಯಸ್ತ್ರೀ ಕರಣ ಬಗ್ಗೆ ಚರ್ಚಿಸಲು ಉತ್ತರ ಕೊರಿಯಾ ನಾಯಕ ಸಿದ್ಧರಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ಪ್ಫ್ ಶನಿವಾರ ಹೇಳಿದ್ದರು. ಈ ಹೇಳಿಕೆಯ ಕೆಲವೇ ಗಂಟೆಗಳಲ್ಲಿ ಉತ್ತರ ಕೊರಿಯಾ ಶಸ್ತ್ರಾಸ್ತ್ರ ಪರೀಕ್ಷೆ ನಡೆಸಿದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್