Sunday, August 18, 2019 9:13 AM

ರುಚಿಕರವಾದ ಚಿಕನ್ ತಂದೂರಿ ಮಾಡುವ ವಿಧಾನ
104
ರುಚಿಕರವಾದ ಚಿಕನ್ ತಂದೂರಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು : ಬಾಯ್ಲರ್ ಚಿಕನ್ – 2 ಕೆಜಿ, ಈರುಳ್ಳಿ-2, ಶುಂಠಿ ತುಂಡು -2, ಜೀರಿಗೆ ಪುಡಿ- 2 ಟೀ ಚಮಚ, ಮೆಣಸಿನ ಪುಡಿ ಅಥವಾ ಅರಶಿನ-3, ಟೀ ಚಮಚ, ಸಾಂಬಾರ ಪದಾರ್ಥಗಳು, ಏಲಕ್ಕಿ- ನಾಲ್ಕು ಕಾಳು, ಲವಂಗ- 4, ಮೊಸರು- 1 ಬಟ್ಟಲು, ಚಿಕನ್ ಬಣ್ಣ-ಅರ್ಧ ಟೀ ಚಮಚ, ದಾಲ್ಚೀನಿ- ಎರಡು ಕಡ್ಡಿ, ತಂಡೂರಿ ಮಸಾಲ ಪುಡಿ, ಉಪ್ಪು- 4 ಟೀ ಚಮಚ, ದೊಡ್ಡ ಬೆಳ್ಳುಳ್ಳಿ- 2, ನೀರು – 1 ಬಟ್ಟಲು, ಬಳೆಯಾಕಾರದಲ್ಲಿ ಕತ್ತರಿಸಿದ ಈರುಳ್ಳಿ- 2, ನಿಂಬೆ ಕತ್ತರಿಸಿದ್ದು-2, ಹುರಿಯಲು ಎಣ್ಣೆ.
ಮಾಡುವ ವಿಧಾನ : ಹಸಿ ಚಿಕನ್ ಅನ್ನು ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಅರಶಿನ ಸಾಂಬಾರ ಪದಾರ್ಥಗಳನ್ನು ಅಥವಾ ಗರಂ ಮಸಾಲ ಪುಡಿ, ಮೊಸರು, ತಂಡೂರಿ ಬಣ್ಣ ಮತ್ತು ಉಪ್ಪು ಜತೆ ನೆನೆ ರಹಾಕಿ. ಇದನ್ನು ಇಡೀ ರಾತ್ರಿ ರೆಫ್ರಿಜರೇಟರ್‌ನಲ್ಲಿ ನೆನೆಯಲು ಬಿಡಿ. ಚಿಕನ್ ನೆನೆದ ನಂತರ ನೀರು ಸೇರಿಸಿ ನೀರೆಲ್ಲಾ ಆವಿಯಾಗುವ ವರೆಗೆ ಬೇಯಿಸಿ ಕಾವಲಿಯಲ್ಲಿ ಎಣ್ಣೆ ಅಗತ್ಯವಿದ್ದಷ್ಟು ಹಾಕಿ. ಕೆಲವೇ ಚಿಕನ್‌ ತುಂಡುಗಳನ್ನು ಎಣ್ಣೆಯಲ್ಲಿ ಹಾಕುತ್ತಾ ಕಂದು ಬಣ್ಣಕ್ಕೆ ಬರುವ ವರೆಗೆ ಹುರಿಯಿರಿ. ಚಿಕನ್‌ನಿಂದ ಎಣ್ಣೆ ಬಸಿದು ಆರಲು ಬಿಡಿ. ಈರುಳ್ಳಿ ವೃತ್ತಗಳಿಗೆ ಚಿಟಿಕೆ ತಂಡೂರಿ ಬಣ್ಣ ಸೇರಿಸಿ. ನಿಂಬೆ ತುಂಡುಗಳಿಂದ ಅಲಂಕರಿಸಿ. ಚಿಟೆಕೆ ಉಪ್ಪು ಸೇರಿಸಿ ಬಡಿಸಿ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್