Sunday, August 18, 2019 9:16 AM

ಸುಂಟಿಕೊಪ್ಪದಲ್ಲಿ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರ
44
ಸುಂಟಿಕೊಪ್ಪದಲ್ಲಿ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರ

ಸುಂಟಿಕೊಪ್ಪ ಆ ೨೩; ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ ತೋಟದ ಬೃಹತ್ ಗಾತ್ರದ ಮರವೊಂದು ರಾತ್ರಿ ಸುರಿದ ಗಾಳಿ ಮಳೆಗೆ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು ನಾಕೂರು, ಕಾನ್‌ಬೈಲು, ನೆಟ್ಲಿ ಬಿ, ಎಮ್ಮೆ ಗುಂಡಿ ಇತರರ ಭಾಗಗಳಿಗೆ ಸಂಪರ್ಕಕ್ಕೆ ಅಡಚಣೆ ಉಂಟಾಗಿತ್ತು ಈ ಭಾಗಕ್ಕೆ ಆಟೋ ದ್ವಿಚಕ್ರ ಹಾಗೂ ಇತರ ವಾಹನಗಳಿಗೆ ಸುಮಾರು ೩ ಗಂಟಗಳ ಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ತೋಟದ ಕಾರ್ಮಿಕರು ಸಾರ್ವಜನಿಕರು ಬೃಹತ್ ಗಾತ್ರದ ಮರವನ್ನು ಕತ್ತರಿಸಿ ತೆರವುಗೊಳಿಸಿ ಸಾರ್ವಜನಿಕರ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.

ನಿತ್ಯ ಈ ರಸ್ತೆಗಾಗಿ ಶಾಲಾ ಕಾಲೇಜು ಮಕ್ಕಳು ಸಾರ್ವಜನಿಕರು ಸಂಚರಿಸುತ್ತಿದ್ದು ತೋಟದ ಮಾಲಿಕರುಗಳಿಗೆ ಮನೆಗಳ ಮತ್ತು ರಸ್ತೆ ಬದಿಯ ಬೃಹತ್ ಮರವನ್ನು ತೆರವು ಗೊಳಿಸಲು ಹಲವಾರು ಬಾರಿ ಮನವಿಮಾಡಿಕೊಳ್ಳಲಾಗಿದ್ದರೂ, ಮಾಲೀಕರು ಇತ್ತ ಗಮನ ಹರಿಸಿಲ್ಲ.ಸ್ಥಳೀಯ ನಿವಾಸಿಗಳು ಅಸಾಮಾಧಾನ ವ್ಯಕ್ತಪಡಿಸಿದ್ದು ಮಳೆಗಾಲವಾಗಿದ್ದರಿಂದ ಇಂತಹ ಘಟಣೆ ಅಗಾಗ ಸಂಭವಿಸುತ್ತಿರುತ್ತದೆ ಮರ ಬೀಳುವ ಸಂದರ್ಭ ಪ್ರಯಾಣಿಕರು ಯಾರು ಇಲ್ಲದಿರುವುದರಿಂದ ಭಾರೀ ಅನಾಹುತ ತಪ್ಪಿದಂತ್ತಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್