

ಮಕ್ಕಳ ಕಲ್ಯಾಣ ಆಯುಕ್ತರ ಭೇಟಿ : ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಾಂತ್ವನ
ಮಡಿಕೇರಿ ಆ.೧೩ : ಮಕ್ಕಳ ಕಲ್ಯಾಣ ಆಯುಕ್ತರಾದ ಆಂಥೋನಿ ಸೆಬಾಸ್ಟಿನ್ ಮತ್ತು ಸದಸ್ಯರಾದ ಪರಶುರಾಮ್ ಅವರು ಮಂಗಳವಾರ ಕುಶಾಲನಗರ ಮತ್ತು ಗುಡ್ಡೆಹೊಸೂರು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಚಟುವಟಿಕೆ ಸಂಬಂಧಿಸಿದಂತೆ ಹಲವು ಮಾಹಿತಿ ಪಡೆದರು.
ಸರ್ಕಾರೇತರ ಸಂಸ್ಥೆಗಳು, ಮನೋವಿಜ್ಞಾನಿಗಳು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳಿಗೆ ಮನೋಸ್ಥೈರ್ಯ ತುಂಬಬೇಕು ಎಂದು ಮಕ್ಕಳ ಕಲ್ಯಾಣ ಆಯುಕ್ತರು ತಿಳಿಸಿದರು.
ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ಆಪ್ತ ಸಮಾಲೋಚನೆ ನೀಡಬೇಕು. ನೋಡಲ್ ಅಧಿಕಾರಿಗಳಿಗೆ ಹಾಗೂ ಪರಿಹಾರ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ಹಮ್ಮಿಕೊಳ್ಳುವಂತೆ ಸಲಹೆ ಮಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ, ಡಯಟ್ ಕೂಡಿಗೆಯ ಉಪನ್ಯಾಸಕರಾದ ಮಲ್ಲೇಸ್ವಾಮಿ ಇತರರು ಹಾಜರಿದ್ದರು.


