Sunday, September 15, 2019 3:55 AM

ಕಾಟಕೇರಿಯ ವಿವಿಧ ಸಂಘದಿಂದ ಸಂತ್ರಸ್ತರಿಗೆ ಪರಿಹಾರ ವಿತರಣೆ
90
ಕಾಟಕೇರಿಯ ವಿವಿಧ ಸಂಘದಿಂದ ಸಂತ್ರಸ್ತರಿಗೆ ಪರಿಹಾರ ವಿತರಣೆ

ಮಡಿಕೇರಿ ಆ. 20 : ಸಮೀಪದ ಕಾಟಕೇರಿ ಕೂರನಬಾಣೆಯ ಸ್ತ್ರೀ ಶಕ್ತಿ ಸಂಘ , ಧರ್ಮಸ್ಥಳ ಸಂಘ, ಸ್ವಸಹಾಯ ಸಂಘ, ಸ್ವಯಂ ಸೇವ ಯುವಕ ಸಂಘ ಹಾಗೂ ಗ್ರಾಮಸ್ಥರಿಂದ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.
ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಸುಮಾರು 10 ಸಾವಿರದಷ್ಟು ಹಣ ಸಂಗ್ರಹಿಸಿ ಕಣ್ಣ ಬಲಮುರಿಯ ಮಾರಿಯಮ್ಮ ದೇವಾಲಯದ ಸಮುದಾಯ ಭವನದಲ್ಲಿರುವ ಸುಮಾರು 150 ಜನ ನೆರೆ ಸಂತ್ರಸ್ತರಿಗೆ ದಿನ ನಿತ್ಯಕ್ಕೆ ಬೇಕಾಗುವ ಸಾಮಗ್ರಿಗಳನ್ನು ನೀಡಿದರು.
ಈ ಸಂಧರ್ಭ ಸಂಘದ ಸದಸ್ಯರಾದ ಬಿ.ಸಿ ಗಿರಿಜ ಮಾತನಾಡಿ, ಈ ಭಾರಿಯ ಮಹಾ ಮಳೆ ಭಾರಿ ಅನಾಹುತ ಸಂಭವಿಸಿದ್ದು, ಹಲವು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ನಮ್ಮ ಗ್ರಾಮದ ಸಂಘ ಸಂಸ್ಥೆಗಳು ಸೇರಿ ಸಂತ್ರಸ್ತರ ನೆರವಿಗೆ ಮುಂದಾಗಿದ್ದು, ಸಂತ್ರಸ್ತರಿಗೆ ದಿನನಿತ್ಯದ ಬಳಕೆಗೆ ಬೇಕಾದ ಅಗತ್ಯ ವಿಸ್ತುಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಾಹ ಘಟನೆಗಳು ಮರುಕಳಿಸದಿರಲಿ ಎಂದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್