Monday, October 21, 2019 9:30 PM

ಮೆಗಾಸ್ಟಾರ್ ಎಂದೇ ಖ್ಯಾತರಾದ ಚಿರಂಜೀವಿ
105
ಮೆಗಾಸ್ಟಾರ್ ಎಂದೇ ಖ್ಯಾತರಾದ ಚಿರಂಜೀವಿ

ತೆಲುಗು ನಟ, ರಾಜಕಾರಣಿ, ಮೆಗಾಸ್ಟಾರ್ ಎಂದೇ ಖ್ಯಾತರಾದ ಚಿರಂಜೀವಿ (ಕೊಣಿದೆಲ ಶಿವಶಂಕರ್ ವರ ಪ್ರಸಾದ್) 1955, ಆ. 22 ರಂದು ಆಂಧ್ರಪ್ರದೇಶದ ಮೊಗಲ್ತೂರ್ ಎಂಬ ಹಳ್ಳಿಯಲ್ಲಿ ಜನಿಸಿದರು.
ಜಿರಂಜೀವಿ ನಿಡದವೋಲು, ಗುರಜಲಾ, ಬಾಪಟ್ಲಾ, ಪೊನ್ನುರು, ಮಂಗಳಗಿರಿ ಮತ್ತು ಮೊಗಲ್ತೂರ್‍ನಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ಅವರು ಚಿಕ್ಕ ವಯಸ್ಸಿನಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಅವರ ತಂದೆ ಕಾನ್‍ಸ್ಟೇಬಲ್ ಆಗಿದ್ದರು.

ಜಿರಂಜೀವಿ ನರಸಾಪುರದ ಶ್ರೀ ವೈ. ಎನ್. ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಚೆನ್ನೈಗೆ ತೆರಳಿ ಫಿಲ್ಮ್ ಇನ್‍ಸ್ಟಿಟ್ಯೂಟ್‍ಗೆ ಸೇರಿಕೊಂಡು ನಟನಾ ವೃತ್ತಿಯನ್ನು ಮುಂದುವರಿಸಿದರು. ತಮಿಳು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳ ಜೊತೆಗೆ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿರುವ ಚಿರಂಜೀವಿ 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1998ರಲ್ಲಿ ಸಂಸ್ಥೆಯೊಂದನ್ನು ಸ್ಥಾಪಿಸಿ ಇದರ ಮೂಲಕ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. 2008ರಲ್ಲಿ ‘ಪ್ರಜಾರಾಜ್ಯಂ’ ಪಕ್ಷವನ್ನು ಸ್ಥಾಪಿಸಿದರು. 2012 ರಿಂದ 2014ರ ವರೆಗೆ ಯುಪಿಎ ನೇತೃತ್ವದ ಕೇಂದ್ರ ಸರಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. 2006ರಲ್ಲಿ ಕೇಂದ್ರ ಸರಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಸಾಧನೆಗೆ ಫಿಲ್ಮ್‍ಫೇರ್ ಪ್ರಶಸ್ತಿಗಳು ಸೇರಿದಂತೆ ಸಿನೆಮಾ ಕ್ಷೇತ್ರದ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳು ಸಂದಿವೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್