Monday, June 1, 2020 10:31 AM

ಗ್ರೀನ್‍ ಟೀಯ ಆರೋಗ್ಯಕಾರಕ ಅಂಶಗಳು
224
ಗ್ರೀನ್‍ ಟೀಯ ಆರೋಗ್ಯಕಾರಕ ಅಂಶಗಳು

ಗ್ರೀನ್‍ ಟೀ ಎಲ್ಲರಿಗೂ ಇಷ್ಟ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಕುದಿಸಿದರೆ ಮಾತ್ರ ಅದು ಆರೋಗ್ಯದಾಯಕ ಮಾತ್ರವಲ್ಲ ರುಚಿಯಾದ ಪೇಯವೂ ಆಗಬಲ್ಲುದು. ಸಾಮಾನ್ಯ ಚಹಾದ ತರಹ ಗ್ರೀನ್ ಟೀಗೆ ಹಾಲು ಬೆರೆಸುವುದಿಲ್ಲ. ಬೇಕೆಂದರೆ ಸ್ವಲ್ಪ ಜೇನುತುಪ್ಪ ಹಾಕಬಹುದು. 1 ಕಪ್ ನೀರಿಗೆ 1 ಟೀ ಚಮಚ ಗ್ರೀನ್ ಚಹಾ ಎಲೆಗಳನ್ನು ಉಪಯೋಗಿಸಬೇಕು. ಟೀ ಬ್ಯಾಗ್ ಬಳಸುವುದಾದರೆ 1 ಟೀ ಬ್ಯಾಗ್ ಗೆ 1 ಕಪ್ ಕುದಿಸಿದ ನೀರು ಸಾಕು. 2 ರಿಂದ 3 ನಿಮಿಷ ಕುದಿಸಿದರೆ ಸಾಕು. 3 ನಿಮಿಷಕ್ಕಿಂತ ಜಾಸ್ತಿ ಬಿಟ್ಟರೆ ಅದು ಕಹಿಯಾಗಿ ಬಿಡುತ್ತದೆ. ಎಲೆಗಳನ್ನು ಹಾಕಿ ಕಾಯಿಸುವುದಕ್ಕಿಂತ ಕುದಿಸಿ ಇಳಿಸಿದ ಬಿಸಿನೀರಿಗೆ ಗ್ರೀನ್ ಟೀ ಹಾಕಿ ಒಂದೆರಡು ನಿಮಿಷ ಬಿಟ್ಟು ಕುಡಿದರೆ ತುಂಬಾ ಒಳ್ಳೆಯದು.
ಜರಡಿಯ ಜಾಲದ ತೂತುಗಳು ಸಣ್ಣದಿದ್ದಷ್ಟೂ ಒಳ್ಳೆಯದು. ಇತ್ತೀಚಿನವರೆಗೂ ಭಾರತದಲ್ಲಿ ಇತ್ತೀಚೆಗೆ ಹೆಚ್ಚಿನ ಬಳಕೆಗೆ ಬಂದ ಟೀ ಆರೋಗ್ಯಕರ ಎಂದು ಪ್ರಚಾರ ಪಡೆದುಕೊಳ್ಳುತ್ತಿದೆ. ಹಸಿರು ಟೀ ಯಲ್ಲಿರುವ ಫ್ಲೇವನಾಯ್ಡುಗಳು ಹಸಿರು ಸಸ್ಯಗಳಲ್ಲಿ ಹೇರಳವಾಗಿದ್ದು ಸಸ್ಯಗಳನ್ನು ಹಲವು ರೀತಿಯಲ್ಲಿ ಕಾಪಾಡುತ್ತವೆ. ಇವು ಒಂದು ರೀತಿಯಲ್ಲಿ ನಮ್ಮ ದೇಹಕ್ಕೆ ಆಂಟಿ ಆಕ್ಸಿಡೆಂಟುಗಳ ರೂಪದಲ್ಲಿ ಕಾರ್ಯನಿರ್ವಹಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತವೆ. ಹಸಿರು ಟೀ ಸೇವನೆಯ ಪ್ರಮುಖ ಪ್ರಯೋಜನವೆಂದರೆ ಕೊಬ್ಬಿನ ಕರಗಿಸುವಿಕೆ. ಹಸಿರು ಟೀ ಯಲ್ಲಿರುವ ಕೆಲವು ಪೋಷಕಾಂಶಗಳು ಜೀವರಾಸಾಯನಿಕ ಕ್ರಿಯೆಯನ್ನು ತೀವ್ರಗೊಳಿಸುವ ಮೂಲಕ ಇದಕ್ಕೆ ಅಗತ್ಯವಿರುವ ಕೊಬ್ಬನ್ನು ಹೆಚ್ಚು ದಹಿಸುವ ಮೂಲಕ ನೈಸರ್ಗಿಕವಾಗಿ ಕರಗಿಸುತ್ತದೆ ಎಂದು ಸಂಶೋಧನೆಗಳೇ ತಿಳಿಸುತ್ತಿವೆ.
ಹಸಿರು ಟೀ ಯಲ್ಲಿರುವ ಕ್ಯಾಟೆಚಿನ್ ಎಂಬ ಪೋಷಕಾಂಶ ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಮರ್ಥವಾಗಿದೆ. ಮುಂಜಾವಿನ ಉಪಾಹಾರದೊಂದಿಗೆ ಹಸಿರು ಟೀ ಸೇವಿಸಿ ದಿನದ ಇತರ ಹೊತ್ತಿನಲ್ಲಿ ಹಲವು ಕಪ್ ಹಸಿರು ಟೀ ಸೇವಿಸುವ ಮೂಲಕ ದಿನದ ಚಟುವಟಿಕೆಗಳಿಗೆ ಹೆಚ್ಚಿನ ಶಕ್ತಿ ದೊರಕುತ್ತದೆ. ಸಾಮಾನ್ಯವಾಗಿ ಧೂಳು, ಹೂವಿನ ಪರಾಗ ಮೊದಲಾದವುಗಳಿಗೆ ಅಲರ್ಜಿ ಹೊಂದಿರುವ ವ್ಯಕ್ತಿಗಳು ಹಸಿರು ಟೀ ಸೇವಿಸುವ ಮೂಲಕ ಇದರ ತೊಂದರೆಗಳಿಂದ ಮುಕ್ತಿ ಪಡೆದಿರುವುದನ್ನು ಸಂಶೋಧನೆಗಳು ಪ್ರಕಟಿಸಿವೆ. ಹಸಿರು ಟೀ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿರುವುದನ್ನು ಈ ಸಂಶೋಧನೆಗಳು ಸ್ಪಷ್ಟಪಡಿಸಿವೆ.
ಸಂಶೋಧನೆಗಳಲ್ಲಿ ಕಂಡುಕೊಂಡ ಪ್ರಕಾರ ಹಸಿರು ಟೀ ಸೇವನೆಯಿಂದ ಸ್ಮರಣಶಕ್ತಿ ಮತ್ತು ಜಾಗೃತ ಶಕ್ತಿಯೂ ಹೆಚ್ಚುತ್ತರೆ. ಹಸಿರು ಟೀಯಲ್ಲಿರುವ EGCG (Epigallocatechin gallate (EGCG), ಅಥವಾ epigallocatechin-3-gallate) ಎಂಬ ಪೋಷಕಾಂಶಗಳು ದೇಹದಲ್ಲಿ ಕ್ಯಾನ್ಸರ್ ಗೆ ತುತ್ತಾಗಿರುವ ಜೀವಕೋಶಗಳ ಬೆಳವಣಿಗೆಯನ್ನು ಉಳಿದ ಜೀವಕೋಶಗಳ ಮೇಲೆ ಪ್ರಭಾವ ಬೀಳದಂತೆ ಕುಂಠಿತಗೊಳಿಸುತ್ತದೆ ಹಾಗೂ ಕ್ಯಾನ್ಸರ್‌ಗೆ ತುತ್ತಾದ ಜೀವಕೋಶಗಳನ್ನು ನಷ್ಟಗೊಳಿಸಿ ಮಾರಕ ಕಾಯಿಲೆಯಿಂದ ರಕ್ಷಿಸುತ್ತದೆ. ಹಸಿರು ಚಹಾ (ಗ್ರೀನ್ ಟೀ) ಯಲ್ಲಿ ಒಂದು ನಿರ್ಧಾರಿತ ಪ್ರಮಾಣದ ಕೆಫೀನ್ ಇದ್ದು ಇದು ಎಲ್ಲಾ ತರಹದ ತಲೆನೋವುಗಳನ್ನು ನಿವಾರಿಸಲು ಅತ್ಯಂತ ಸೂಕ್ತವಾದ ಪ್ರಮಾಣವಾಗಿದೆ. ಹಸಿರು ಟೀಯಲ್ಲಿ ಹಾಲಿಲ್ಲದೇ ಕೊಂಚವೇ ಸಕ್ಕರೆ ಸೇರಿಸಿ ಕುಡಿಯಬಹುದು ಅಥವಾ ಕೊಂಚ ಲಿಂಬೆರಸ ಸೇರಿಸುವುದರಿಂದ ರುಚಿ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ಷಮತೆಯೂ ಹೆಚ್ಚುತ್ತದೆ.
ಹೊಟ್ಟೆ ನೋವಿಗಾಗಿ ಹಾಲಿನ ಚಹಾದ ಬದಲಿಗೆ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ. ಅಷ್ಟೇ ಅಲ್ಲದೆ ಗ್ರೀನ್ ಟೀಯೊಂದಿಗೆ ಸಣ್ಣ ತುಂಡು ಶುಂಠಿಯನ್ನು ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ನಮ್ಮ ದೇಹದಲ್ಲಿ ಯಾವುದೋ ಮಾಯೆಯಿಂದ ಒಳಪ್ರವೇಶಿಸಿ ವಿಶೇಷವಾಗಿ ಹಲ್ಲು ಮತ್ತು ಗಂಟಲಿನೊಳಗೆ ಮನೆ ಮಾಡಿಕೊಂಡು ಹಬ್ಬ ಆಚರಿಸುತ್ತಿರುವ ವಿವಿಧ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುವಲ್ಲಿಯೂ ಹಸಿರು ಟೀ ಮಹತ್ವದ ಪಾತ್ರ ವಹಿಸುತ್ತದೆ. ಬೇರೆಯ ಟೀ ಗಳಿಗಿಂತ ಗ್ರೀನ್‌ ಟೀ, ಆರೋಗ್ಯ ದೃಷ್ಟಿಯಲ್ಲಿ ಉತ್ತಮ ಎನ್ನಿಸಿಕೊಳ್ಳುತ್ತದೆ. ಆದರೆ ಒಂದು, ಗ್ರೀನ್‌ ಟೀ  ಕುಡಿಯಲು ಮೊದಲು ಅದಕ್ಕೆ ಹಾಲು ಬೆರೆಸಬಾರದು. ಹಾಗೆ ಬೆರೆಸಿದರೆ, ಅಲ್ಲಿನ ಆ್ಯಂಟಿಆಕ್ಸಿಡೆಂಟ್‌ಗುಣ ಮಾಯವಾಗಿ, ಇದಕ್ಕೂ ಬೇರೆ ಟೀ ಗಳಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ. ಗ್ರೀನ್‌ ಟೀಯಲ್ಲಿ ಕ್ಯಾಫೀನ್‌ ಸಹ ಇರುವುದರಿಂದ, ಇದರ ಸೇವನೆ ದಣಿದ ದೇಹ ಮನಸ್ಸುಗಳಿಗೆ ಸಾಂತ್ವನ ನೀಡುತ್ತದೆ. ಖಿನ್ನತೆ ತಗ್ಗಿ ಚೇತರಿಕೆ, ಉತ್ಸಾಹಗಳು ಹೆಚ್ಚಾಗುತ್ತವೆ. ಗ್ರೀನ್‌ ಟೀ ನಿಯಮಿತ ಸೇವನೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಗ್ರೀನ್‌ ಟೀ ಕುಡಿಯುವವರಲ್ಲಿ ಬೊಜ್ಜು ಅಪರೂಪ. ಅದು ಕೊಲೆಸ್ಟರಾಲ್‌ ಅಂಶವನ್ನು ತಗ್ಗಿಸುವ ಕಾರಣ, ಹೃದ್ರೋಗಗಳ ಸಂಭವ ಕಡಿಮೆ. ಕ್ಯಾನ್ಸರ್‌ನ್ನೂ ಒಂದು ಪ್ರಮಾಣದಲ್ಲಿ ದೂರವಿರಿಸುತ್ತದೆನ್ನಬಹುದು. ಡಯಾಬಿಟಿಸ್‌ ಇರುವವರಿಗೂ ಗ್ರೀನ್‌ ಟೀ ಒಳ್ಳೆಯದೆನ್ನುತ್ತಾರೆ. ಮೆದುಳಿನ ವಿವಿಧ ಕ್ರಿಯೆಗಳೂ ಚುರುಕುಗೊಳ್ಳುತ್ತವೆ ಮತ್ತು ಇಳಿವಯಸ್ಸಿನ ಕಾಯಿಲೆಗಳಾದ ಆಲ್ಜೈಯರ್‌, ಪಾರ್ಕಿನ್‌ ಸೋನಿಸಮ್‌ಗಳೂ ಸಾಕಷ್ಟು ದೂರ ಉಳಿಯುತ್ತವೆಂದು ಹೇಳುತ್ತಾರೆ.
ಗ್ರೀನ್‌ ಟೀನಲ್ಲಿ ಕೆಲವು ಜೀವಸತ್ವಗಳೂ, ಖನಿಜ ಲವಣಗಳೂ ಸಾಕಷ್ಟು ಪ್ರಮಾಣದಲ್ಲಿರುವ ಕಾರಣ, ಅದೊಂದು ಉತ್ತಮ ಆಹಾರವೂ ಹೌದು. ಒಟ್ಟಿನಲ್ಲಿ ಗ್ರೀನ್‌ ಟೀ ಇತರ ಪಾನೀಯಗಳಿಗಿಂತ ಉತ್ತಮ ಆಹಾರ. ಮಿತಿಯಾಗಿ ಸೇವಿಸಿದಾಗ ನಮ್ಮ ಸಮಗ್ರ ಆರೋಗ್ಯವನ್ನು ನಾವು ಉಳಿಸಿಕೊಳ್ಳಲು ಇದು ಸಹಾಯಕ. ಗ್ರೀನ್‌ ಟೀ ಕುಡಿಯುವುದರಿಂದ ಯಾವ ಅಡ್ಡಪರಿಣಾಮಗಳೂ ಇಲ್ಲ, ಇದು ಅತ್ಯಂತ ಆರೋಗ್ಯಕಾರಿ ಪಾನೀಯ ಎಂದು ತಿಳಿದುಕೊಳ್ಳುವುದೂ ಸಹ ತಪ್ಪು. ನಮ್ಮ ಜೀರ್ಣಶಕ್ತಿಯನ್ನ ಕುಂದಿಸುತ್ತವೆ. ನಿದ್ರಾಹೀನತೆಯಂಥ ತೊಂದರೆಗಳಿಗೆ ನಾಂದಿಹಾಡುತ್ತದೆ. ಗರ್ಭಿಣಿಯರು ಗ್ರೀನ್‌ ಟೀ ಸೇವಿಸುವುದರಿಂದ ಅವರ ದೇಹದಲ್ಲಿಯ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿ ಮಗುವಿಗೂ ತೊಂದರೆಯಾಗಬಹುದು. ಅಲ್ಲದೆ, ಕೆಫೀನ್, ಕ್ಯಾಟ್ಚಿನ್ಸ್ ಮತ್ತು ಟ್ಯಾನಿನ್ಗಳು ಗರ್ಭಪಾತಕ್ಕೂ ಕಾರಣವಾಗಬಲ್ಲವು. ಕಣ್ಣಿಗೆ ಸಂಬಂಧಿಸಿದ ಗ್ಲೂಕೋಮಾ ರೋಗಕ್ಕೆ ತುತ್ತಾದವರು ಗ್ರೀನ್‌ ಟೀ ಕುಡಿಯಲೇಬಾರದು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್