Wednesday, November 13, 2019 11:06 AM

ಸುಂಟಿಕೊಪ್ಪದಲ್ಲಿ 55ನೇ ವರ್ಷದ ಸ್ವರ್ಣ ಗೌರಿ ಮೆರವಣಿಗೆ
140
ಸುಂಟಿಕೊಪ್ಪದಲ್ಲಿ 55ನೇ ವರ್ಷದ ಸ್ವರ್ಣ ಗೌರಿ ಮೆರವಣಿಗೆ

ಮಡಿಕೇರಿ ಸೆ.1:
ಸುಂಟಿಕೊಪ್ಪದ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 55ನೇ ವರ್ಷದ ಸ್ವರ್ಣ ಗೌರಿ ಮೆರವಣಿಗೆ ಮತ್ತು ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರೀರಾಮ ಮಂದಿರದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಪಟ್ಟೆಮನೆ ಗೌರಮ್ಮನ ಬಾವಿಯಿಂದ ಗಂಗಾಜಲವನ್ನು ತರುವುದರೊಂದಿಗೆ ಧಾರ್ಮಿಕ ಪೂಜಾ ಕೈಂಕಾರ್ಯಗಳು ನೆರವೇರಿಸಲಾಯಿತು. ನಂತರ ಪುಷ್ಪ ಅಲಂಕೃತವಾದ ಮಂಟಪದಲ್ಲಿ ಗೌರಮ್ಮನನ್ನು ಕುಳ್ಳಿರಿಸಿ ನಾದಸ್ವರದೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಸಾಗಿ ರಾಮಂಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು.
ವಿಶೇಷ ಪೂಜೆ, ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಪೂಜಾ ವಿಧಿವಿಧಾನಗಳನ್ನು ಹಿರಿಯ ಅರ್ಚಕ ಗಣೇಶ ಶರ್ಮಾ, ಮಂಜುನಾಥ್ ಭಟ್, ದರ್ಶನ್ ಭಟ್, ಮನೋಜ್ ಭಟ್ ನೆರವೇರಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಡಿ.ನರಸಿಂಹ, ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್, ರಂಜಿತ್ ಪೂಜಾರಿ, ಲೋಕೇಶ್, ಕಾರ್ಯದರ್ಶಿ ಸುರೇಶ್ ಗೋಪಿ, ಅಣ್ಣುಶೇಖರ್, ಶಾಂತರಾಮ ಕಾಮತ್, ಧನುಕಾವೇರಪ್ಪ, ಪಿ.ಆರ್.ಸುನಿಲ್ ಕುಮಾರ್, ಡಿ.ಕೆ.ರಜನೀಶ್,ರಾಕೇಶ್, ಡಿ.ಎಂ.ಲಕ್ಷ್ಮಣ್,ಕೆ.ಪ್ರಕಾಶ್,ಯು.ಎನ್.ರಮೇಶ್, ಸೂರ್ಯ, ಅರುಣ್‍ಕುಮಾರ್, ಕೆ.ಮಧು, ಮಿಥುನ್, ಬಿ.ವಿ.ತೇಜಸ್, ಎಸ್.ಪೃಥ್ವಿರಾಜ್, ಎಸ್.ರವಿ, ಎಂ.ಆರ್.ಶಶಿಕುಮಾರ್, ಪಿ.ಲೋಕೇಶ್ ಹಾಜರಿದ್ದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್