Sunday, September 15, 2019 3:47 AM

ಅಭಿಮಾನಿ ಚಳಿ ಬಿಡಿಸಿದ ಶ್ವೇತಾಚಂಗಪ್ಪ
284
ಅಭಿಮಾನಿ ಚಳಿ ಬಿಡಿಸಿದ ಶ್ವೇತಾಚಂಗಪ್ಪ

ಬೆಂಗಳೂರು ಸೆ.3 : ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ತಮ್ಮ ಬೇಬಿ ಬಂಪ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಖುಷಿಯ ಹಂಚಿಕೊಂಡಿದ್ದರು. ಆದರೆ ಅಭಿಮಾನಿಯೊಬ್ಬ ಮಾಡಿದ್ದ ಕಮೆಂಟ್ ನಟಿಯ ಮನಸ್ಸು ನೋಯುವಂತೆ ಮಾಡಿದೆ.
ಶ್ವೇತಾ ಚಂಗಪ್ಪ ಅವರು ಇತ್ತೀಚೆಗೆ ಕೊಡಗು ಶೈಲಿಯ ಉಡುಪಿನಲ್ಲಿ ಫೋಟೋಶೂಟ್ ಮಾಡಿಸಿ ಅದನ್ನು ಇನ್ ಸ್ಟಾಗ್ರಾಂಗೆ ಪೋಸ್ಟ್ ಮಾಡಿದ್ದರು. ಈ ಫೋಟೋವನ್ನು ನೋಡಿದ ಅಭಿಮಾನಿಯೊಬ್ಬ ಕೊನೆಗೂ ಸೃಜನ್ ಲೋಕೇಶ್ ತಂದೆಯಾಗುತ್ತೀದ್ದೀರಾ ಅಭಿನಂದನೆಗಳು, ಮಜಾ ಟಾಕೀಸ್ ಗೆ ಹೊಸ ಎಂಟ್ರಿ ಎಂದು ಕಮೆಂಟ್ ಮಾಡಿದ್ದನು.
ಇನ್ ಸ್ಟಾಗ್ರಾಂನ ಕಿಂಗ್ ಆಫ್ ಶೆಟ್ಟಿ ಎಂಬಾತ ಈ ರೀತಿ ಕಮೆಂಟ್ ಮಾಡಿದ್ದು ಇದನ್ನು ನೋಡಿದ ಶ್ವೇತಾ ಚಂಗಪ್ಪ ನೀವು ಸೃಜನ್ ಲೋಕೇಶ್ ಗೆ ಅಭಿನಂದನೆಯನ್ನು ಯಾಕೆ ಹೇಳುತ್ತೀರಿ. ನಾನು ನನ್ನ ವೈಯಕ್ತಿಕ ಫೋಟೋವನ್ನು ಪೋಸ್ಟ್ ಮಾಡಿದ್ದೀನಿ. ನೀವು ತಮಾಷೆ ಎಂದುಕೊಂಡಿದ್ದೀರಾ. ಮೊದಲು ವೈಯಕ್ತಿಕ ಮತ್ತು ವೃತ್ತಿಪರ ವಿಚಾರಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ನೀವು ಸೂಕ್ಷ್ಮತೆಯನ್ನು ಹೊಂದಬೇಕು ಎಂದು ಅಭಿಮಾನಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್