Sunday, September 15, 2019 3:35 AM

ಕೋಳಿ ಮಸಾಲೆ ಮಾಡುವ ವಿಧಾನ
111
ಕೋಳಿ ಮಸಾಲೆ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು:

ಕೋಳಿ: 1/2 ಕೆ.ಜಿ
ಒಣಮೆಣಸು: 8-10
ಬೆಳ್ಳುಳ್ಳಿ: ಒಂದು ಸಣ್ಣ ಗಡ್ಡೆ
ಮೊಸರು : 2 ದೊಡ್ಡ ಚಮಚ
ಅರಿಶಿನ: 1/2 ಚಮಚ
ಚಕ್ಕೆ: 1 ಚೂರು
ಲವಂಗ: 3-4
ಏಲಕ್ಕಿ: 2
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ

ಮಾಡುವ ಬಗೆ

ಬಿಸಿನೀರಲ್ಲಿ 5 ನಿಮಿಶ ಅದ್ದಿ ಇಟ್ಟ ಒಣಮೆಣಸಿಗೆ ಬೆಳ್ಳುಳ್ಳಿ, ಚಕ್ಕೆ, ಏಲಕ್ಕಿ ಮತ್ತು ಲವಂಗ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.  ರುಬ್ಬಿದ ಮಸಾಲೆಗೆ ಉಪ್ಪು, ಅರಿಶಿನ ಮತ್ತು ಮೊಸರು ಹಾಕಿ ಕಲಸಿಕೊಳ್ಳಿ.  ಕಲಸಿದ ಮಿಶ್ರಣಕ್ಕೆ ಕೋಳಿ ತುಂಡನ್ನು ಹಾಕಿ 1- 2 ಗಂಟೆ ಪ್ರಿಡ್ಜ್ ನಲ್ಲಿಡಿ. ದಪ್ಪ ತಳದ ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಕೋಳಿ ತುಂಡುಗಳನ್ನು ಹಾಕಿ, ಉಳಿದ ಮಸಾಲೆಯನ್ನು ಹಾಗೆ ಇಡಿ. ಕೋಳಿ ತುಂಡುಗಳನ್ನು 5-6 ನಿಮಿಶ ತಾಳಿಸಿದ ಮೇಲೆ ಉಳಿದ ಮಸಾಲೆ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ ತಾಳಿಸಿ.  3-4 ನಿಮಿಶದಲ್ಲಿ ಕೋಳಿ ಎಲ್ಲ ಮಸಾಲೆಯನ್ನು ಹೀರಿಕೊಳ್ಳುತ್ತದೆ. ಕೋಳಿ ಮಸಾಲೆಯನ್ನು ಕೊತ್ತಂಬರಿ ಸೊಪ್ಪು, ಲಿಂಬೆಹಣ್ಣು ಮತ್ತು ಈರುಳ್ಳಿ ಜೊತೆಗೆ ಬಡಿಸಿರಿ. ಚಪಾತಿ ಜೊತೆಗೆ ತಿನ್ನಲು ಇದು ರುಚಿಯಾಗಿರುತ್ತದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್