Sunday, January 19, 2020 7:27 AM

ಇಸ್ರೋ ಜೊತೆ ಸೌರವ್ಯೂಹದ ಅನ್ವೇಷಣೆ : ಭಾರತಕ್ಕೆ ನಾಸಾ ಕೊಡುಗೆ
119
ಇಸ್ರೋ ಜೊತೆ ಸೌರವ್ಯೂಹದ ಅನ್ವೇಷಣೆ : ಭಾರತಕ್ಕೆ ನಾಸಾ ಕೊಡುಗೆ

ವಾಶಿಂಗ್ಟನ್ : ಭಾರತದ ಚಂದ್ರಯಾನ-2 ಸಾಧನೆಯನ್ನು ಮುಕ್ತ ಕಂಠದಿಂದ ನಾಸಾ ಪ್ರಶಂಸಿಸಿದೆ. ಭಾರತ ಚಂದ್ರಯಾನ ಯೋಜನೆಯು ತನಗೆ ಸೌರವ್ಯೂಹವನ್ನು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಜೊತೆ ಜಂಟಿಯಾಗಿ ಅನ್ವೇಷಿಸಲು ಸ್ಫೂರ್ತಿ ನೀಡಿದೆಯೆಂದು ಅದು ಹೇಳಿದೆ.
ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಶನಿವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‍ಲ್ಯಾಂಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಭೂನಿಯಂತ್ರಣ ಕೇಂದ್ರದ ಜೊತೆ ಸಂಪರ್ಕ ಕಡಿದುಕೊಂಡಿತ್ತು.
ಅಂತರಿಕ್ಷವು ಬಹುಕಷ್ಟಕರವಾದುದಾಗಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್‍ಅನ್ನು ಇಳಿಸುವ ಇಸ್ರೋದ ಪ್ರಯತ್ನವನ್ನು ನಾವು ಶ್ಲಾಘೀಸುತ್ತೇವೆ ಎಂದು ನಾಸಾ ರವಿವಾರ ಟ್ವೀಟ್ ಮಾಡಿದೆ.
ನಿಮ್ಮ ಪ್ರಯಾಣದೊಂದಿಗೆ ನೀವು ನವಗೆ ಸ್ಫೂರ್ತಿ ನೀಡಿದ್ದೀರಿ ಹಾಗೂ ಭವಿಷ್ಯದಲ್ಲಿ ನಿಮ್ಮೊಂದಿಗೆ ನಮ್ಮ ಸೌರವ್ಯೂಹವನ್ನು ಜೊತೆಯಾಗಿ ಅನ್ವೇಷಿಸಲು ಇರುವ ಉಜ್ವಲ ಅವಕಾಶಗಳನ್ನು ಎದುರು ನೋಡುತ್ತಿದ್ದೇವೆ ಎಂದು ನಾಸಾ ಟ್ವೀಟಿಸಿದೆ.
ಈ ಮಧ್ಯೆ ಟ್ರಂಪ್ ಆಡಳಿತ ದಕ್ಷಿಣ ಹಾಗೂ ಕೇಂದ್ರ ಏಷ್ಯ ವ್ಯವಹಾರಗಳಿಗಾಗಿನ ಸಹಾಯಕ ಕಾರ್ಯದರ್ಶಿ ಅಲೈಸ್ ಜಿ. ವೆಲ್ಸ್ ಕೂಡಾ ಚಂದ್ರಯಾನ 2ಗಾಗಿ ಇಸ್ರೋವನ್ನು ಅಭಿನಂದಿಸಿದ್ದಾರೆ. ಈ ಮಿಶನ್ ಭಾರತಕ್ಕೊಂದು ದೊಡ್ಡ ಹೆಜ್ಜೆಯಾಗಿದೆ ಹಾಗೂ ವೈಜ್ಞಾನಿಕ ಪ್ರಗತಿಗೆ ಉತ್ತೇಜನ ನೀಡುವ ಅಮೂಲ್ಯವಾದ ದತ್ತಾಂಶಗಳನ್ನು ಒದಗಿಸಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್