Sunday, September 15, 2019 4:33 AM

ಸಿಎಂಗೆ ಚಾಲೆಂಜ್ ಹಾಕಿದ ನಟಿ ಸೋನು ಗೌಡ
72
ಸಿಎಂಗೆ ಚಾಲೆಂಜ್ ಹಾಕಿದ ನಟಿ ಸೋನು ಗೌಡ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸೋನು ಗೌಡ ಅವರು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಚಾಲೆಂಜ್ ಹಾಕಿದ್ದಾರೆ.

ಸೋನು ಗೌಡ ಅವರು ತಮ್ಮ ಟ್ವಿಟ್ಟರಿನಲ್ಲಿ, ಸಿಎಂ ಅವರೇ ನೀವು ದಂಡ ವಿಧಿಸುವ ಮೊದಲು ದಯವಿಟ್ಟು ನೀವು ಉತ್ತಮ ರಸ್ತೆಗಳನ್ನು ನೀಡುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಇದು ಸಾಮಾನ್ಯ ಜನರು ಕಷ್ಟಪಟ್ಟು ಸಂಪಾದಿಸಿದ ಹಣ, ದಯವಿಟ್ಟು ಅವರ ಜೀವನವನ್ನು ಹಾಳು ಮಾಡಬೇಡಿ” ಎಂದು ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವಿಟ್ಟರಿನಲ್ಲಿ ಸೋನು ಅವರು ಸವಾರನೊಬ್ಬ ಬೈಕಿನಿಂದ ಬೀಳುತ್ತಿರುವ ಫೋಟೋ ಹಾಕಿದ್ದಾರೆ. ಅಲ್ಲದೆ ಆ ಫೋಟೋದಲ್ಲಿ, ಕುಡಿದು ಚಾಲನೆ – 10,000 ರೂ., ಜಂಪಿಂಗ್ ಟ್ರಾಫಿಕ್ ಲೈಟ್- 5,000 ರೂ., ಮೊಬೈಲ್ ಫೋನ್ ಬಳಕೆ – 5,000 ರೂ., ಅತಿವೇಗ – 5,000ರೂ ಹಾಗೂ ಸೀಟ್‍ಬೆಲ್ಟ್ ಧರಿಸದಿದ್ದರೆ – 1,000 ರೂ. ರಸ್ತೆಯಲ್ಲಿ ನಾವು ನೋಡಿದ ಗುಂಡಿಗಳಿಗೆ ಸರ್ಕಾರಕ್ಕೆ ಎಷ್ಟು ದಂಡ ವಿಧಿಸಬೇಕು ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್