Sunday, September 15, 2019 3:35 AM

ಮಡಿಕೇರಿ ಎಲ್‍ಐಸಿ ಯಿಂದ 63ನೇ ವಿಮಾ ಸಪ್ತಾಹ ಸಮಾರೋಪ : ಕೊಡಗಿನ ಯುವಪೀಳಿಗೆ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳಿ : ಡಾ.ಸುಮನ್ ಪನ್ನೇಕರ್ ಕರೆ
35
ಮಡಿಕೇರಿ ಎಲ್‍ಐಸಿ ಯಿಂದ 63ನೇ ವಿಮಾ ಸಪ್ತಾಹ ಸಮಾರೋಪ : ಕೊಡಗಿನ ಯುವಪೀಳಿಗೆ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳಿ : ಡಾ.ಸುಮನ್ ಪನ್ನೇಕರ್ ಕರೆ

ಮಡಿಕೇರಿ ಸೆ. 10 : ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನ ಯುವಕ, ಯುವತಿಯರು ಪಾಲ್ಗೊಳ್ಳಿ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಪನ್ನೇಕರ್ ಕರೆ ನೀಡಿದ್ದಾರೆ.

ಮಡಿಕೇರಿಯ ಎಲ್‍ಐಸಿಯ ವತಿಯಿಂದ ಆಯೋಜಿತ ಎಲ್ ಐಸಿಯ 63 ನೇ ವಿಮಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಪನ್ನೇಕರ್, ಕೊಡಗು ಜಿಲ್ಲೆಯಲ್ಲಿ ಸೇನಾಪಡೆಗಳಿಗೆ ಹೆಚ್ಚಿನ ಯುವ ಜನರು ಸೇರ್ಪಡೆಗೊಳ್ಳುತ್ತಿರುವುದು ಸಂತೋಷದ ವಿಚಾರ. ಇದೇ ರೀತಿ ಪೊಲೀಸ್ ಇಲಾಖೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವಕಾಶಗಳಿದ್ದು ಕೊಡಗಿನ ಯುವಕರು ಪೊಲೀಸ್ ಪಡೆಗೆ ಸೇರಲು ಉತ್ಸುಕತೆ ತೋರುತ್ತಿಲ್ಲ ಎಂದು ವಿಷಾಧಿಸಿದರು.

ಮುಂದಿನ ದಿನಗಳಲ್ಲಿ ಕೊಡಗಿನ ಯುವಕ, ಯುವತಿಯರು ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಲಿ ಎಂದೂ ಪೊಲೀಸ್ ವರಿಷ್ಟಾಧಿಕಾರಿ ಆಶಿಸಿದರು.

ಎಲ್ ಐಸಿಯ ಶಾಖಾ ವ್ಯವಸ್ಥಾಪಕ ಅರುಳ್ ಸೆಲ್ವಿ ಕುಚೇಲನ್ ಮಾತನಾಡಿ, ಗ್ರಾಹಕರ ನಿರಂತರ ಬೆಂಬಲ, ಪ್ರೋತ್ಸಾಹದಿಂದಾಗಿಯೇ ಎಲ್‍ಐಸಿ ಭ್ರಷ್ಟಾಚಾರ ಮುಕ್ತ ಸಂಸ್ಥೆಯಾಗಿ ಹೆಸರುವಾಸಿಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಜೀವವಿಮಾ ನಿಗಮದ ಅಧಿಕಾರಿ ಶಶಿಧರ್ ಎಲವಟ್ಟಿ ಎಲ್ ಐಸಿ ಸಾಗಿ ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಎಲ್‍ಐಸಿಯ ಮಹಿಳಾ ಪ್ರತಿನಿಧಿಗಳ ಯಶಸ್ವಿನಿ ತಂಡದಿಂದ ಕೊಡವ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಮನರಂಜಿಸಿತ್ತು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್