Sunday, September 15, 2019 4:11 AM

ರೀಬಿಲ್ಡ್ ಕೊಡಗು : ಬಾಲಮಂದಿರದ ಮಕ್ಕಳಿಗೆ ಕಂಪ್ಯೂಟರ್ ವಿತರಣೆ
65
ರೀಬಿಲ್ಡ್ ಕೊಡಗು : ಬಾಲಮಂದಿರದ ಮಕ್ಕಳಿಗೆ ಕಂಪ್ಯೂಟರ್ ವಿತರಣೆ

ಮಡಿಕೇರಿ ಸೆ.11 : ರೀಬಿಲ್ಡ್ ಕೊಡಗು ಇವರ ವತಿಯಿಂದ ಮಕ್ಕಳ ಪಾಲನೆ ಮತ್ತು ಪೋಷಣೆಗಾಗಿ ಬಾಲಕರ ಬಾಲಮಂದಿರ ಮತ್ತು ಬಾಲಕಿಯರ ಬಾಲಮಂದಿರದಲ್ಲಿ ದಾಖಲಾಗಿರುವ ಮಕ್ಕಳ ಕಲಿಕೆಗಾಗಿ ಐದು ಕಂಪ್ಯೂಟರ್‍ಗಳನ್ನು ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಕೊಡಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಅಜ್ಜಿಕುಟೀರ ಎಂ. ಸೂರಜ್, ರೀಬಿಲ್ಡ್ ಕೊಡಗು ಸ್ಥಾಪಕರಾದ ಕೆ.ಎ.ಕುಶಾಲಪ್ಪ, ಪಾಲೆಂದಿರ ರಾಧಾ, ಅನೀಸ್, ಕೊಡಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಬಿ.ಎಸ್.ಕುಮಾರಿ, ಎ.ಎಸ್.ಉಷಾ ಅಯ್ಯಣ್ಣ, ನಮಿತಾ ಆರ್. ರಾವ್ ಇತರರು ಇದ್ದರು.
ರೀಬಿಲ್ಡ್ ಕೊಡಗು ಸಂಸ್ಥೆಯ ಸ್ಥಾಪಕರಾದ ಕೆ.ಎ.ಕುಶಾಲಪ್ಪ ಅವರು ಮಾತನಾಡಿ ಕಳೆದ ವರ್ಷ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮತ್ತು ನೊಂದವರಿಗೆ ನೆರವು ನೀಡಲಾಗಿದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕ ಹಾಗೆಯೇ ಕಂಪ್ಯೂಟರ್ ನೀಡಲಾಗುತ್ತಿದೆ. ಬಡ ಮಕ್ಕಳಿಗೆ ಶಾಲಾ ಶುಲ್ಕವನ್ನು ಭರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್