Sunday, September 15, 2019 3:55 AM

ಹಾರ್‍ಬೈಲ್ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ
68
ಹಾರ್‍ಬೈಲ್ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ

ಸುಂಟಿಕೊಪ್ಪ,ಸೆ.11: ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿಯ ಹಾರ್‍ಬೈಲ್ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಸ್ಥಿತಿಯಲ್ಲಿ ಮೃತ ದೇಹವೊಂದು ಕಂಡು ಬಂದಿದೆ.
ಹಾರ್‍ಬೈಲ್ ಹೊಳೆಯಲ್ಲಿ ಬುಧವಾರ ಬೆಳಿಗ್ಗೆ ಅಂದಾಜು 40 ರಿಂದ 45 ವಯೋಮಾನದ ವ್ಯಕ್ತಿಯ ಮೃತದೇಹ ಕಂಡು ಬಂದಿದ್ದು, ಮುಖದ ಭಾಗ ನೀರಿನಲ್ಲಿ ಮುಳುಗಿರುವುದರಿಂದ ಮುಖಚಾರ್ಯ ಕಾಣುತ್ತಿಲ್ಲ.
ಈ ಮೃತದೇಹವು ಹಟ್ಟಿಹೊಳೆ ಕಡೆಯಿಂದ ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಮಹಜರು ಪರಿಶಿಲನೆ ನಡೆಸಿ ಕಳೆದ ಅಂದಾಜು 15 ದಿನಗಳು ಕಳೆದಿರಬಹುದು ಎನ್ನುವ ಶಂಕೆಯಿದ್ದು ಮೃತದೇಹವು ಕೊಳೆತ ಸ್ಥಿತಿಯಲ್ಲಿದೆ.
ಕೆಂಪು ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ತೊಟ್ಟಿರುವುದು ಕಂಡು ಬಂದಿದೆ. ಮೃತ ದೇಹವನ್ನು ಮಡಡಿಕೇರಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಈ ವ್ಯಕ್ತಿಯ ಸಂಬಂಧಿಕರು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸುಂಟಿಕೊಪ್ಪ ಪೊಲೀಸ್ ಠಾಣೆ 08276 262333, 9480804953 ಸಂಪರ್ಕಿಸುವಂತೆ ಸುಂಟಿಕೊಪ್ಪ ಪೊಲೀಸರು ತಿಳಿಸಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್