Monday, October 21, 2019 9:18 PM

ಕರಾವಳಿ ಸ್ಪೆಷಲ್‌ ಮೀನು ಫ್ರೈ
251
ಕರಾವಳಿ ಸ್ಪೆಷಲ್‌ ಮೀನು ಫ್ರೈ

ಅಗತ್ಯ ಸಾಮಗ್ರಿ: 1 ಕೆ.ಜಿ ಮೀನು, ಫ್ರೈಗೆ ಅಗತ್ಯ ಇರುವಷ್ಟು ಎಣ್ಣೆ, ಒಗ್ಗರಣೆಗೆ ಕರಿಬೇವು, 1 ಚಮಚ  ಕೊತ್ತಂಬರಿ ಬೀಜ, ಅರ್ಧ ಚಮಚ ಗರಂ ಮಸಾಲ, 1 ದೊಡ್ಡ ಈರುಳ್ಳಿ/4ಒಂದು ದೊಡ್ಡ ಶುಂಠಿ, 5 ಎಸಳು ಬೆಳ್ಳುಳ್ಳಿ/46 ಒಣ ಮೆಣಸು, 1 ಚಮಚ ಮೆಂತ್ಯದ ಕಾಳು, ಅರ್ಧ ಚಮಚ ಅರಿಶಿಣ ಪುಡಿ, ಉಪ್ಪು.
ಮಾಡುವುದು ಹೀಗೆ:
ತೊಳೆದ ಮೀನಿನ ತುಂಡುಗಳ ಮೇಲೆ ಉಪ್ಪು ಸವರಿ. ಮೇಲೆ ಹೇಳಿರುವ ಎಲ್ಲ ಸಾಮಾಗ್ರಿಗಳನ್ನು ಪೇಸ್ಟ್ ಮಾಡಿ. ಈ ಪೇಸ್ಟ್‌ಅನ್ನು ಉಪ್ಪು ಸವರಿಟ್ಟ ಮೀನಿನ ತುಂಡುಗಳಿಗೆ ಸವರಿ. 30 ರಿಂದ 40 ನಿಮಿಷ ಹಾಗೆಯೇ ಬಿಡಿ. ತವಾದಲ್ಲಿ ಎಣ್ಣೆ ಕಾದ ನಂತರ ಈ ಮೀನಿನ ತುಂಡುಗಳನ್ನು ಹಾಕಿ ಚೆನ್ನಾಗಿ  ಫ್ರೈ ಮಾಡಿ. ಘಮಘಮಿಸುವ ಕರಾವಳಿ ಸ್ಪೆಷಲ್‌ ಫ್ರೈ ಸವಿಯಲು ಸಿದ್ಧ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್