Monday, October 21, 2019 8:22 PM

ಪ್ರಜ್ಞೆತಪ್ಪಿಸಿ ಮಾಂಗಲ್ಯ ಅಪಹರಣ
80
ಪ್ರಜ್ಞೆತಪ್ಪಿಸಿ ಮಾಂಗಲ್ಯ ಅಪಹರಣ

ಹಾಸನ ಸೆ.12 : ಮಹಿಳೆಯ ಪ್ರಜ್ಞೆ ತಪ್ಪಿಸಿ 1.75 ಲಕ್ಷ ರೂ ಮೌಲ್ಯದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ.
ದಮ್ಮನಿಂಗಲ ಗ್ರಾಮದ ಕೆಂಗಮ್ಮ ಸರ ಕಳೆದುಕೊಂಡ ಮಹಿಳೆ. ಪುತ್ರ ಕೇಶವನ ಆರೋಗ್ಯ ತಪಾಸಣೆ ಮಾಡಿಸಲು ಇಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಕೇಶವನನ್ನು ಆಸ್ಪತ್ರೆಯ ಬಳಿ ಇರಿಸಿ ಕೆಎಸ್‍ಆಆರ್ ಟಿಸಿ ಬಸ್ ನಿಲ್ದಾಣದ ಬಳಿಗೆ ಕೆಂಗಮ್ಮ ಬಂದಿದ್ದಾರೆ.
ಅದೇ ಮಾರ್ಗದಲ್ಲಿ ಪರ್ಸ್ ಒಂದು ಬಿದ್ದಿತ್ತು. ಅಲ್ಲಿದ್ದ ಅಪರಿಚಿತ ಮಹಿಳೆಯೊಬ್ಬಳು, ಕೆಂಗಮ್ಮ ಅವರಿಗೆ ‘ನಿಮ್ಮ ಪರ್ಸ್ ಬಿದ್ದಿದೆ ಎತ್ತಿಕೊಳ್ಳಿ’ ಎಂದು ಹೇಳಿದ್ದಾರೆ. ಅದರಂತೆ ಕೆಂಗಮ್ಮ ಪರ್ಸ್ ಎತ್ತಿಕೊಂಡಾಗ ಹಣ ಹಂಚಿಕೊಳ್ಳೋಣ, ಬನ್ನಿ ಪಕ್ಕದ ಪಾಕ್9ಗೆ ಹೋಗೋಣ ಎಂದು ಹೇಳಿ ಅಲ್ಲಿಗೆ ಕರೆದುಕೊಂಡು ಹೋಗಿದ್ದಾಳೆ
ಅಷ್ಟೊತ್ತಿಗೆ ಅಲ್ಲಿಗೆ ಸುಮಾರು 40 ವರ್ಷ ಪ್ರಾಯದ ವ್ಯಕ್ತಿ ಬಂದು ‘ಪಸ್9 ನನ್ನದು’ ಎಂದು ಹೇಳಿ ಕೆಂಗಮ್ಮ ಅವರ ಪ್ರಜ್ಞೆ ತಪ್ಪಿಸಿ ಸುಮಾರು 55 ಗ್ರಾಂ ತೂಕದ ಸರ ಕಸಿದುಕೊಂಡು ಇಬ್ಬರೂ ಪರಾರಿಯಾಗಿದ್ದಾರೆ.ಶ್ರವಣಬೆಳಗೊಳ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್