Monday, June 1, 2020 12:04 PM

ಸೈನಿಕನ ಶಸ್ತ್ರಾಸ್ತ್ರ ಕಸಿದ ಉಗ್ರರು
128
ಸೈನಿಕನ ಶಸ್ತ್ರಾಸ್ತ್ರ ಕಸಿದ ಉಗ್ರರು

ಶ್ರೀನಗರ ಸೆ.13 : ಕರ್ತವ್ಯ ನಿರತ ಸೈನಿಕರಿಂದಲೇ ಶಸ್ತ್ರಾಸ್ತ್ರ ಕಸಿದ ಪರಾರಿಯಾಗಿದ್ದು, ಸ್ಥಳದಲ್ಲಿ ಕಫ್ರ್ಯೂ ಹೇರಲಾಗಿದೆ.
ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪಿಡಿಪಿ ಮುಖಂಡ ಶೇಖ್ ನಾಸಿರ್ ಭದ್ರತೆಗಾಗಿ ನಿಯೋಜನೆಯಾಗಿದ್ದ ಸೈನಿಕ ತನ್ನ ಕರ್ತವ್ಯ ನಿರತನಾಗಿದ್ದಾಗ ಮುಖಂಡನ ಬೆಂಬಲಿಗರ ಗುಂಪಿನಲ್ಲಿದ್ದ ಶಂಕಿತ ಉಗ್ರರು ಸೈನಿಕರ ಬಂದೂಕು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದೀಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಕಫ್ರ್ಯೂ ಹೇರಲಾಗಿದೆ.
ಸೇನಾ ಮೂಲಗಳು ತಿಳಿಸಿರುವಂತೆ ಸೈನಿಕನ ಒಂದು ಎಕೆ 47 ಬಂದೂಕನ್ನು ಶಂಕಿತ ಉಗ್ರರು ಕಸಿದಿದ್ದು, ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಉಗ್ರನಿಗಾಗಿ ಸೇನೆ ತೀವ್ರ ಶೋಧ ನಡೆಸಿದ್ದು, ಸೈನಿಕರ ಶೋಧಕಾರ್ಯಕ್ಕೆ ಸ್ಥಳೀಯ ಪೆÇಲೀಸರು ಕೂಡ ಸಾಥ್ ನೀಡಿದ್ದಾರೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಇದೀಗ ನಾಕಾಬಂದಿ ಹಾಕಲಾಗಿದ್ದು, ಈ ವರ್ಷದಲ್ಲಿ ನಡೆದ 2ನೇ ಕೃತ್ಯವಾಗಿದೆ. ಈ ಹಿಂದೆ ಅಂದರೆ ಮಾರ್ಚ್ 8ರಂದು ಮುಸುಕುಧರಿಸಿದ್ದ ಉಗ್ರರು ಶಾಹಿಗ್ ಮಜಾರ್ ಪ್ರಾಂತ್ಯದ ಪಿಎಸ್ ಒ ದಲೀಪ್ ಕುಮಾರ್ ಅವರ ಮನೆಯಲ್ಲಿನ ಭದ್ರತಾ ಸಿಬ್ಬಂದಿಯಿಂದ ಬಂದೂಕು ಕಸಿದಿದ್ದ ಉಗ್ರರು ಒಂದು ಎಕೆ 47 ಬಂದೂಕು ಮತ್ತು 90 ಬುಲೆಟ್ ಗಳೊಂದಿಗೆ ಪರಾರಿಯಾಗಿದ್ದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್