Monday, October 21, 2019 9:42 PM

ಚಿದಂಬರಂ ಜಾಮೀನು ಅರ್ಜಿ ವಜಾ
57
ಚಿದಂಬರಂ ಜಾಮೀನು ಅರ್ಜಿ ವಜಾ

ನವದೆಹಲಿ ಸೆ.13 : ಐಎನ್‍ಎಕ್ಸ್ ಮೀಡಿಯ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಜಾಮೀನು ಕೋರಿ ದೆಹಲಿ ಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಈ ಹಿಂದೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ 14 ದಿನಗಳ ನ್ಯಾಯಾಂಗ ಬಂಧವವನ್ನು ಪ್ರಶ್ನಿಸಿ ಅವರು ದೆಹಲಿ ಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹರ್ ಅವರು, ಇಡಿ ಪರ ವಕೀಲರ ವಾದಕ್ಕೆ ಮಾನ್ಯತೆ ನೀಡಿ ಚಿದಂಬರಂ ಅವರ ಅರ್ಜಿ ವಜಾಗೊಳಿಸಿದ್ದಾರೆ.
ಈ ಹಿಂದಿನ ವಿಚಾರಣೆಯಲ್ಲಿ ಚಿದಂಬರಂ ಹೊಂದಿರುವ ಸ್ಥಾನ ಮಾನವು ವಿಚಾರಣೆಗೆ ಅಡ್ಡಿ ಮಾಡುವ ಸಾಧ್ಯತೆಯಿದೆ ಎಂದು ಸಿಬಿಐ ಆತಂಕ ವ್ಯಕ್ತಪಡಿಸಿತ್ತು. ಚಿದಂಬರಂ ವಿರುದ್ಧ ಮಾಡಲಾಗಿರುವ ಆರೋಪಗಳು ಗಂಭೀರವಾಗಿರುವ ಕಾರಣ ಅವರನ್ನು ವಶಕ್ಕೆ ನೀಡಲಾಗುತ್ತಿದೆ ಎಂದು ವಿಚಾರಣಾ ನ್ಯಾಯಾಲಯ ಸ್ಪಷ್ಟಪಡಿಸಿತ್ತು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್