Monday, June 1, 2020 11:11 AM

ಬಿಲ್ಲವ ಸೇವಾ ಸಮಾಜ : ವಿರಾಜಪೇಟೆಯಲ್ಲಿ ನಾರಾಯಣ ಗುರು ಜಯಂತಿ
239
ಬಿಲ್ಲವ ಸೇವಾ ಸಮಾಜ : ವಿರಾಜಪೇಟೆಯಲ್ಲಿ ನಾರಾಯಣ ಗುರು ಜಯಂತಿ

ಮಡಿಕೇರಿ ಸೆ.14 :
ಒಂದು ಜಾತಿ, ಒಂದು ಮತ, ಒಬ್ಬನೇ ದೇವರು ಎಂಬ ಅಸಾಮಾನ್ಯ ತತ್ವವನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯನ್ನು ವಿರಾಜಪೇಟೆ ತಾಲ್ಲೂಕು ಬಿಲ್ಲವ ಸಮಾಜದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡಲಾಯಿತು.
ವಿರಾಜಪೇಟೆಯ ಅಂಬ್ಬಟ್ಟಿ ಗ್ರಾಮದ ಶ್ರೀನಾರಾಯಣ ಗುರು ಮಂದಿರದಲ್ಲಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಗಣೇಶ್ ಅವರು ಶೋಷಿತ ವರ್ಗಕ್ಕೆ ಸಮಾಜದಲ್ಲಿ ಸಮಾನ ಅವಕಾಶಗಳು ದೊರೆಯುವಂತೆ ಮಾಡಿದ ಶ್ರೇಷ್ಠ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದ ಶ್ಲಾಘಿಸಿದರು.
ದೀನ ದಲಿತರ ಮೇಲೆ ನಡೆಯುತ್ತಿದ್ದ ಶೊಷಣೆಗಳನ್ನು ಪ್ರತಿಭಟಿಸಿ ಮಾನವೀಯ ಮೌಲ್ಯಗಳನ್ನು ಸಾರುವ ಮೂಲಕ ದೇವರೊಬ್ಬನೇ ಎಂದು ಪ್ರತಿಪಾದಿಸಿದ ಗುರುಗಳ ಆದರ್ಶ ಇಂದು ಪಾಲನೆಯಾಗಬೇಕಾಗಿದೆ ಎಂದರು.
ಸಮಾಜದಲ್ಲಿನ ಒಡಕು ದೂರವಾಗಬೇಕಾದರೆ ಜಾತಿ ಪದ್ಧತಿಗೆ ಮುಕ್ತಿ ಸಿಗಬೇಕೆಂದು ಅಭಿಪ್ರಾಯಪಟ್ಟ ಅವರು, ಬಿಲ್ಲವ ಸಮಾಜದ ಬಲವರ್ಧನೆಗೆ ಪ್ರತಿಯೊಬ್ಬರು ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಸದಸ್ಯರಿಗಾಗಿ ಸಂಘ ಕೆಲವು ಉಪಯೋಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದ್ದು, ಮರಣ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ಗಣೇಶ್ ಹೇಳಿದರು.

ನಿವೃತ್ತ ಡಿವೈಎಸ್‍ಪಿ ಬಿ.ಆರ್.ಲಿಂಗಪ್ಪ ಅವರು ಮಾತನಾಡಿ ಸಮಾಜದ ಬಂಧುಗಳು ಶ್ರೀ ನಾರಾಯಣ ಗುರುಗಳ ಅದರ್ಶ ಮತ್ತು ತತ್ವ ಸಿದ್ಧಾಂತಗಳನ್ನು ಪಾಲನೆ ಮಾಡುವಂತೆ ಕರೆ ನೀಡಿದರು. ಜೀವನದಲ್ಲಿ ಪ್ರತಿಯೊಂದು ಧರ್ಮವನ್ನು ಸರಿಸಮಾನವಾಗಿ ಕಾಣಬೇಕು ಮತ್ತು ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಮೂಲಕ ಉನ್ನತ ಪದವಿಗೇರಿ ಸಮಾಜ ಸೇವೆಯಲ್ಲಿ ತೊಡಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರಿಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಸಮಾಜದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಪುರುಷೋತ್ತಮ್, ಗೌರವ ಅಧ್ಯಕ್ಷ ಬಿ.ಅರ್.ರಾಜ, ಕಾರ್ಯದರ್ಶಿ ಬಿ.ಜನಾರ್ಧನ್, ಸಹ ಕಾರ್ಯದರ್ಶಿ ಮಣಿ ಬಿ., ಮಹಿಳಾ ಉಪಾಧ್ಯಕ್ಷೆ ಬಿ.ಅರ್.ಅನಿತ, ಪ್ರಮುಖರಾದ ಗೋವಿಂದನ್, ಉದ್ಯಮಿ ಬಿ.ಆರ್.ಬೋಜಪ್ಪ ಹಾಗೂ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್