Monday, June 1, 2020 11:50 AM

ಕೈಲ್ ಮೂಹೂರ್ತ ಸಂತೋಷ ಕೂಟ : ಸಾಧಕರಿಗೆ ಸನ್ಮಾನ : ಕೊಡವ ಸಂಸ್ಕøತಿ ಉಳಿಸಿ, ಬೆಳೆಸಲು ಕರೆ
114
ಕೈಲ್ ಮೂಹೂರ್ತ ಸಂತೋಷ ಕೂಟ : ಸಾಧಕರಿಗೆ ಸನ್ಮಾನ : ಕೊಡವ ಸಂಸ್ಕøತಿ ಉಳಿಸಿ, ಬೆಳೆಸಲು ಕರೆ

ಮಡಿಕೇರಿ ಸೆ.15 :
ವಿಶಿಷ್ಟ ಸಂಸ್ಕøತಿಯನ್ನು ಹೊಂದಿರುವ ಕೊಡವ ಆಚಾರ, ವಿಚಾರಗಳನ್ನು ಭವಿಷ್ಯದ ಹಿತದೃಷ್ಟಿಯಿಂದ ಉಳಿಸಿ, ಬೆಳೆಸುವ ಮಹತ್ವದ ಜವಬ್ದಾರಿ ಸಮಾಜದ ಮೇಲಿದೆ ಎಂದು ಮಡಿಕೇರಿ ಕೊಡವ ಸಮಾಜದ ಅದ್ಯಕ್ಷ ಕೊಂಗಂಡ ಎಸ್.ದೇವಯ್ಯ ತಿಳಿಸಿದ್ದಾರೆ.
ಮಡಿಕೇರಿ ಕೊಡವ ಸಮಾಜದ ವತಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ ಕೈಲ್ ಮೂಹೂರ್ತ ಸಂತೋಷ ಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡವ ಸಂಸ್ಕøತಿಯ ಬಗ್ಗೆ ಯುವ ಜನಾಂಗದಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪೆÇೀಷಕರು ಮಾಡಬೇಕಾಗಿದೆ. ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೈನ್ಯಕ್ಕೆ ಸೇರಿ ಸಾಧನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಕ್ರೀಡೆ, ಕಲೆ, ಶಿಕ್ಷಣ, ಉದ್ಯಮ, ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿ ದೇಶ, ವಿದೇಶಗಳಲ್ಲಿ ಗುರುತಿಸಿಕೊಂಡಿರುವುದು ಕೊಡಗಿನ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ದೇವಯ್ಯ ಹರ್ಷ ವ್ಯಕ್ತಪಡಿಸಿದರು.
ಮಕ್ಕಳು ತಮಗೆ ಆಸಕ್ತಿ ಇರುವ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾದರು ಪೆÇೀಷಕರು ಪೆÇ್ರೀತ್ಸಾಹ ನೀಡಬೇಕು. ಇದರ ಜೊತೆಗೆ ಹಿರಿಯರು ಪರಿಚಯಿಸಿರುವ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಆಸಕ್ತಿ ತೋರಬೇಕೆಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ವಕೀಲ ಎಂ.ಟಿ.ನಾಣಯ್ಯ ಪ್ರತಿಯೊಂದು ಕೆಲಸವನ್ನು ಶ್ರದ್ಧೆ ಹಾಗೂ ಪರಿಶ್ರಮದಿಂದ ಮಾಡಬೇಕು, ಹಾಗಾದಲ್ಲಿ ಮಾತ್ರ ಯಶಸ್ಸು ಗಳಿಸಲು ಸಾಧ್ಯವೆಂದರು. ಕೊಡವ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಡಾ.ಗಣಪತಿ ಮಾತನಾಡಿ,ಜನರಿಗೆ ಸೇವೆ ಮಾಡಬೇಕೆನ್ನುವ ನಿಟ್ಟಿನಲ್ಲಿ ನಾನು ವೈದ್ಯ ವೃತ್ತಿ ಆರಿಸಿಕೊಂಡು 43 ವರ್ಷಗಳಿಂದ ಜನರಿಗೆ ಕಡಿಮೆ ವೆಚ್ಚದಲ್ಲಿ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಕರ್ತವ್ಯದ ಜತೆಗೆ ಸೇವಾ ಮನೋಭಾವ ಹೊಂದಿರುವುದು ನೆಮ್ಮದಿ ತಂದಿದೆ ಎಂದು ಹೇಳಿದರು.
::: ಸನ್ಮಾನ :::
ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಹೊಟ್ಟೆಯಂಗಡ ಸಚಿನ್ ಪೂವಯ್ಯ, ವೈದ್ಯ ಡಾ.ಅಜ್ಜಮಾಡ ಗಣಪತಿ, ಹೈಕೋರ್ಟ್ ವಕೀಲ ಮುಕ್ಕಾಟಿರ ಟಿ.ನಾಣಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕೈಲ್ ಮುಹೂರ್ತ ಹಬ್ಬದ ಅಂಗವಾಗಿ ಕೊಡವ ಸಾಂಪ್ರದಾಯಿಕ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು. ಕೊಡವರ ಆಹಾರ ಪದ್ಧತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಸಂತೋಷ ಕೂಟದಲ್ಲಿ ಆಯೋಜಿಸಲಾಗಿದ್ದ ಆಹಾರ ಪ್ರದರ್ಶನ ಗಮನ ಸೆಳೆಯಿತು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್