Monday, October 21, 2019 9:17 PM

ಸುಸಜ್ಜಿತ ಆಸ್ಪತ್ರೆ : ಸಿಂಹಗೆ ರಶ್ಮಿಕಾ ಪ್ರಶ್ನೆ
167
ಸುಸಜ್ಜಿತ ಆಸ್ಪತ್ರೆ : ಸಿಂಹಗೆ ರಶ್ಮಿಕಾ ಪ್ರಶ್ನೆ

ಬೆಂಗಳೂರು ಸೆ.17 : ಕೊಡಗಿನ ಬೆಡಗಿ ಸ್ಯಾಂಡಲ್ ವುಡ್, ಟಾಲಿವುಡ್‍ನಲ್ಲಿ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಹಿಂದೊಮ್ಮೆ ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆಯೊಂದರ ಅಗತ್ಯದ ಕುರಿತು ಟ್ವೀಟ್ ಮಾಡಿರುವುದು ನೆನಪಿದೆಯಷ್ಟೆ. ಇದಕ್ಕೆ ಸಂಸದ ಪ್ರತಾಪ್ ಸಿಂಹ ಸಹ ಪ್ರತಿಕ್ರಯಿಸಿದ್ದರು. ಇದೀಗ ರಶ್ಮಿಕಾ ಮತ್ತೆ ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ.
ಈ ಬಾರಿ ನಟಿ ತಾವು ಈ ಹಿಂದೆ ಕೇಳಿದ್ದ ಕೊಡಗಿನ ಆಸ್ಪತ್ರೆ ಕುರಿತ ವಿಷಯದ ಬಗೆಗೆ ಅಪ್‍ಡೇಟ್ಸ್ ಏನಾದರೂ ಇದೆಯೆ ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದ್ದಾರೆ.
“ಸಂಸದ ಪ್ರತಾಪ್ ಸಿಂಹ ಅವರೇ, ನಾನು ಈ ಟ್ವೀಟ್ ಮಾಡುತ್ತಿರುವುದು ಕೊಡಗಿಗೆ ಸುಸಜ್ಜಿತ ಆಸ್ಪತ್ರೆಯ ವಿಚಾರವಾಗಿ. ಈ ಬಗ್ಗೆ ಏನಾದರೂ ಅಪ್‍ಡೇಟ್ಸ್ ಸಿಗುತ್ತದೆಯೆ?, ಈ ಕುರಿತ ಬೆಳವಣಿಗೆಗಳ ಸಂಬಂಧ ಏನಾದರೂ ಮಾಹಿತಿ ಲಭಿಸಿದರೆ ಸಂತೋಷವಾಗುತ್ತದೆ” ಎಂದು ರಶ್ಮಿಕಾ ತಮ್ಮ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದನ್ನು ಸಂಸದ ಪ್ರತಾಪ್ ಸಿಂಹ ಅವರಿಗೆ ಟ್ಯಾಗ್ ಸಹ ಮಾಡಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್