Monday, October 21, 2019 8:33 PM

ದಿಢೀರ್ ರ್ಟೊಮೇಟೊ ಗೊಜ್ಜು ಮಾಡುವ ವಿಧಾನ
216
ದಿಢೀರ್ ರ್ಟೊಮೇಟೊ ಗೊಜ್ಜು ಮಾಡುವ ವಿಧಾನ

ಬೇಕಾಗುವ ಪದಾರ್‍ತಗಳು: ಟೊಮೇಟೊ ಹಣ್ಣು ಕಾಲು ಕೆ. ಜಿ., 4 ಹಸಿಮೆಣಸಿನಕಾಯಿ, 50 ಗ್ರಾಂ ಈರುಳ್ಳಿ, 1 ಚಮಚ ಉದ್ದಿನಬೇಳೆ, 1 ಚಮಚ ಕಡ್ಲೆಬೇಳೆ, 2 ಚಮಚ ಸಾರಿನ ಪುಡಿ, ರುಚಿಗೆ ತಕ್ಕ ಉಪ್ಪು, ಸಾಸಿವೆ, ಒಣಮೆಣಸಿನಕಾಯಿ, ಎಣ್ಣೆ, ಇಂಗು.

ಮಾಡುವ ಬಗೆ: ಟೊಮೇಟೊ ಹಣ್ಣುಗಳನ್ನು ಹಾಗೂ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಪಾತ್ರೆಗೆ ಎಣ್ಣೆ ಹಾಕಿ ಉದ್ದಿನಬೇಳೆ, ಕಡ್ಲೆಬೇಳೆ, ಸಾಸಿವೆ, ಹಸಿಮೆಣಸಿನಕಾಯಿ, ಇಂಗು, ಚಿಟಿಕೆ ಅರಿಶಿನ ಪುಡಿ ಹಾಕಿ ಹೆಚ್ಚಿದ ಟೊಮೇಟೊ ಹಾಗೂ ಈರುಳ್ಳಿಯನ್ನು ಹಾಕಿ ಆರ್‍ದ ಲೋಟ ನೀರು, ಸಾರಿನ ಪುಡಿ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ 5 ನಿಮಿಶ ಬೇಯಿಸಿಕೊಳ್ಳಿ. ಒಣಮೆಣಸಿನ ಕಾಯಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿ. ತಯಾರಿಸಿದ ದಿಡೀರ ಟೊಮೇಟೊ ಗೊಜ್ಜನ್ನು ಚಪಾತಿಗೆ ನೆಂಚಿಕೊಳ್ಳಲು ನೀಡಿ. ಅನ್ನದೊಂದಿಗೂ ಸವಿಯಲು ನೀಡಬಹುದು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್