Monday, October 21, 2019 8:21 PM

ಸಾಹಸಸಿಂಹ ಎಂದೇ ಖ್ಯಾತಿ ಗಳಿಸಿದ ವಿಷ್ಣುರ್ವಧನ್
86
ಸಾಹಸಸಿಂಹ ಎಂದೇ ಖ್ಯಾತಿ ಗಳಿಸಿದ ವಿಷ್ಣುರ್ವಧನ್

ಕನ್ನಡ ಚಿತ್ರರಂಗದ ನಟ, ಸಾಹಸಸಿಂಹ ಎಂದೇ ಖ್ಯಾತಿ ಗಳಿಸಿದ ವಿಷ್ಣುರ್ವಧನ್ (ಸಂಪತ್ ಕುಮಾರ್) ಎಚ್.ಎಲ್. ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಗೆ ಮೈಸೂರಿನಲ್ಲಿ ಸೆ. 18, 1950 ರಂದು ಜನಿಸಿದರು. ಪ್ರಾಧಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆ ಪೂರ್ಣಗೊಳಿಸಿದರು. ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗಿಡಿಯ ನ್ಯಾಶನಲ್ ಕಾಲೇಜಿನಲ್ಲಿ ಪಡೆದುಕೊಂಡರು.
ಅವರು 1955ರಲ್ಲಿ ‘ಶಿವಶರಣ ನಂಬೆಯಕ್ಕ’ ಸಿನೆಮಾದಲ್ಲಿ ಬಾಲ ನಟನಾಗಿ ಅಭಿನಯಿಸಿದರು. ಈ ಸಿನಿಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನಿಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ಧಪಡಿಸಿದ ಈ ಸಿನಿಮಾ ಸಂಪತ್ ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು. ಮುಂದೆ 1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನಿಮಾದಲ್ಲಿ ಕೂಡ ವಿಷ್ಣು ನಟಿಸಿದರು. ಸಂಪತ್ ಕುಮಾರ್ ಆಗಿದ್ದ ವಿಷ್ಣುವರ್ಧನ್ 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರದ ಮೂಲಕ ನಾಯಕ ನಟನಾಗಿ ಮಿಂಚಿದರು.
ಡಾ.ವಿಷ್ಣುವರ್ಧನ್ ಸುಮಾರು 200ಕ್ಕೂ ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ನಟಿ ಭಾರತಿ ಅವರನ್ನು 1975ರಲ್ಲಿ ಮದುವೆಯಾದರು. ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.
2005ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ. ರಾಜ್ಯೋತ್ಸವ ಪ್ರಶಸ್ತಿ, ಫೀಲ್ಮ್‍ಫೇರ್ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಇವರಿಗೆ ಸಂದಿವೆ. ವಿಷ್ಣುವರ್ಧನ್ ಸ್ಮರಣಾರ್ಥ ಭಾರತ ಸರಕಾರ 2013ರಲ್ಲಿ ಅಂಚೆ ಚೀಟಿ ಹೊರತಂದಿದೆ. 2009, ಡಿ. 30 ರಂದು ವಿಷ್ಣು ನಿಧನರಾದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್