Monday, October 21, 2019 9:30 PM

ಹುಳಿ, ಖಾರ ಮಿಶ್ರಿತವಾದ ಚಿಕನ್ ಮೊಸರು ಮಸಾಲ
84
ಹುಳಿ, ಖಾರ ಮಿಶ್ರಿತವಾದ ಚಿಕನ್ ಮೊಸರು ಮಸಾಲ

ಬೇಕಾಗುವ ಸಾಮಾನುಗಳು

1 ಕೆಜಿ ಚಿಕನ್,  2 ಈರುಳ್ಳಿ, 2 ಟೊಮ್ಯಾಟೊ, ಹಸಿ ಮೆಣಸಿನ ಕಾಯಿ 1, 2 ಚಮಚ ಜೀರಿಗೆ, 2 ಚಮಚ ಎಣ್ಣೆ, 1/4 ಚಮಚ ಅರಿಶಿಣ, 2, ಚಮಚ ಗರಂ ಮಸಾl ಮೆಣಸಿನ ಪುಡಿ (ಖಾರಕ್ಕೆ ತಕ್ಕಷ್ಟು), ಉಪ್ಪು ರುಚಿಗೆ, 1/2 ಕಪ್ ಮೊಸರು, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ

ಮೊಸರನ್ನು ಚೆನ್ನಾಗಿ ಕದಡಿಡಬೇಕು. ಒಂದು ಕಡಾಯಿ ಗೆ ಎಣ್ಣೆ ಯನ್ನು ಹಾಕಿ ಒಲೆಯ ಮೇಲೆ ಇಡಬೇಕು,ಎಣ್ಣೆ ಬಿಸಿ ಆದ ಮೇಲೆ, ಜೀರಿಗೆ ಮತ್ತು ಈರುಳ್ಳಿ ಯನ್ನು ಹಾಕಬೇಕು. ಚೆನ್ನಾಗಿ ಫ್ರೈ ಮಾಡಿದ ನಂತರ ಟೊಮೆಟೊ, ಅರಿಶಿಣ ಪುಡಿ, ಗರಂ ಮಸಾಲ, ಮೆಣಸಿನ ಪುಡಿ ಹಾಕಬೇಕು.  ನಂತರ ಚೆನ್ನಾಗಿ ತೊಳೆದ ಚಿಕ್ಕದಾಗಿ ಕತ್ತರಿಸಿದ ಚಿಕನ್ ಅನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಈಗ ಮೊಸರನ್ನು ಚೆನ್ನಾಗಿ ಕಡೆದು ಹಾಕಬೇಕು,ನಂತರ ರುಚಿಗೆ ತಕ್ಕಸ್ಟು ಉಪ್ಪು ಹಾಕಿ 10 ರಿಂದ 12 ನಿಮಿಷ ಬೇಯಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ ಮೊಸರು ಮಸಾಲ ರೆಡಿ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್