Monday, October 21, 2019 8:22 PM

ಅವಲಕ್ಕಿ ಉಪ್ಪಿಟ್ಟು ಎಷ್ಟು ಆರೋಗ್ಯಕರ ಗೊತ್ತಾ?
238
ಅವಲಕ್ಕಿ ಉಪ್ಪಿಟ್ಟು ಎಷ್ಟು ಆರೋಗ್ಯಕರ ಗೊತ್ತಾ?

ನಮ್ಮ ಬೆಳಗಿನ ಉಪಾಹಾರದಲ್ಲಿ ಅವಲಕ್ಕಿ ಒಂದು ಅವಿಭಾಜ್ಯ ಅಂಗವೇ ಆಗಿ ಬಿಟ್ಟಿದೆ. ಸುಲಭವಾಗಿ ಮಾಡಲು ಸಾಧ್ಯವಾಗುವ ತಿಂಡಿಗಳಲ್ಲಿ ಅವಲಕ್ಕಿ ಉಪ್ಪಿಟ್ಟು ಕೂಡಾ ಒಂದು. ಆದರೆ ಇದು ಎಷ್ಟು ಆರೋಗ್ಯಕರ ಗೊತ್ತಾ?

ಓಟ್ಸ್,ನೂಡಲ್ಸ್ ನಂತಹ  ಆಹಾರ ವಸ್ತುಗಳು ಭಾರತದಲ್ಲಿ ಜನಪ್ರಿಯವಾಗುವ ಮೊದಲೇ ಅವಲಕ್ಕಿಯೇ ನಂ.1 ಸ್ಥಾನದಲ್ಲಿತ್ತು. ಅವಲಕ್ಕಿ ತಿನ್ನುವುದು ನಮ್ಮ ದೇಹಕ್ಕೆ ಓಟ್ಸ್ ನಷ್ಟೇ ಉತ್ತಮ. ಅವಲಕ್ಕಿಯಲ್ಲಿ ಶೇ. 76 ರಷ್ಟು ಕಾರ್ಬೋಹೈಡ್ರೇಟ್ ಅಂಶವಿದೆ. 23 ಶೇ. ಕೊಬ್ಬಿನಂಶವಿದೆ.   ಇದರಲ್ಲಿ ವಿಟಮಿನ್ ಬಿ ಅಂಶ ಹೇರಳವಾಗಿರುವುದರಿಂದ ಮಧುಮೇಹ ನಿಯಂತ್ರಿಸುವ ಗುಣ ಹೊಂದಿದೆ.  ಅವಲಕ್ಕಿಯಲ್ಲಿ ಪೋಷಕಾಂಶಗಳು ಏನೂ ಇಲ್ಲದಿದ್ದರೂ, ಅದಕ್ಕೆ ಕೊಂಚ ತರಕಾರಿ ಹಾಕಿ ಉಪ್ಪಿಟ್ಟು ಮಾಡಿಕೊಂಡು ತಿನ್ನುವುದರಿಂದ ರುಚಿಕರ ಮತ್ತು ಆರೋಗ್ಯಕರವಾಗುವುದು. ಅಕ್ಕಿ ಬಳಸಿ ಮಾಡುವುದರಿಂದ ಇದು ಬೇಗನೇ ಜೀರ್ಣವಾಗುವುದು.   ಇದರಲ್ಲಿ ವಿಟಮಿನ್ ಬಿ ಜತೆಗೆ ವಿಟಮಿನ್ ಎ, ಕಬ್ಬಿಣದಂಶ, ಕ್ಯಾಲ್ಶಿಯಂ, ಪೋಸ್ಪರಸ್ ಇರುವುದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಮತ್ತೇಕೆ ತಡ? ಬೆಳಗಿನ ಉಪಾಹಾರಕ್ಕೆ ಚಿಂತೆಯಿಲ್ಲದೆ ಉಪ್ಪಿಟ್ಟು ಮಾಡಿ ತಿನ್ನಿ! ತುಸುಬೇಯಿಸಿದ ಅಕ್ಕಿ (ಕುಸುಬಲಕ್ಕಿ)ಯಷ್ಟೇ ವಿಟಮಿನ್ ಅಂಶಗಳು ಇದರಲ್ಲಿರುತ್ತದೆ ಮತ್ತು ಪಾಲಿಶ್ ಮಾಡದೇ ಇರುವುದರಿಂದ ಪೋಷಕಾಂಶಗಳೂ ಇರುತ್ತವೆ. ಬಿ ಕಾಂಪ್ಲೆಕ್ಸ್ ವಿಟಮಿನ್ ನಿಯಾಸಿನ್ ಮತ್ತು ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ಅವಲಕ್ಕಿಯನ್ನು ಮುಖ್ಯವಾಗಿ ಒಂದು ಲಘುತಿಂಡಿಯನ್ನಾಗಿ ಬಳಸಲಾಗುತ್ತದೆ. ಅವಲಕ್ಕಿಯು ಏಷಿಯಾದಲ್ಲಿ ಜನಪ್ರಿಯ ತಿನಿಸಾಗಿದೆ. ಇದಕ್ಕೆ ಹಲವು ರೀತಿಯ ಒಗ್ಗರಣೆ, ಮಸಾಲೆ, ಸಿಹಿ ಮುಂತಾದವುಗಳನ್ನು ಸೇರಿಸಿ ಹಲವು ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್