Monday, October 21, 2019 9:19 PM

ಮಡಿಕೇರಿ ದಸರಾ ಜನೋತ್ಸವ : ದಸರಾ ಸಮಿತಿಯಿಂದ ಅಂತಿಮ ಸಿದ್ಧತೆ
67
ಮಡಿಕೇರಿ ದಸರಾ ಜನೋತ್ಸವ : ದಸರಾ ಸಮಿತಿಯಿಂದ ಅಂತಿಮ ಸಿದ್ಧತೆ

ಮಡಿಕೇರಿ ಅ.6 :
ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಆಯುಧ ಪೂಜಾ ಉತ್ಸವ ಮತ್ತು ಶೋಭಾಯಾತ್ರೆಗೆ ಸಿದ್ಧತೆಗಳನ್ನು ಮಡಿಕೇರಿ ನಗರ ದಸರಾ ಸಮಿತಿ ಮಾಡಿಕೊಂಡಿದೆಯೆಂದು ಸಮಿತಿಯ ಕಾರ್ಯಾಧ್ಯಕ್ಷರಾದ ರಾಬಿನ್ ದೇವಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುಧ ಪÀÇಜೆಯ ದಿನವಾದ ಅ.7 ರಂದು ಸಂಜೆ 7 ಗಂಟೆಗೆ ಆಯುಧ ಪೂಜಾ ಸಮಾರಂಭದ ಉದ್ಘಾಟನಾ ಸಮಾರಂಭ, ಬಳಿಕ ಅಲಂಕೃತ ಮಂಟಪಗಳ ಸ್ಪರ್ಧಾ ಕಾರ್ಯಕ್ರಮ, ರಾತ್ರಿ 8.30 ಗಂಟೆಗೆ ಸಮಾರೋಪ ಮತ್ತು ಬಹುಮಾನ ವಿತರಣೆÉ ನಡೆಯಲಿದೆ. ಮಳೆÉಯಿಂದಾಗಿ ಗಾಂಧಿ ಮೈದಾನ ಕೆಸರು ಮಯವಾಗಿದ್ದು, ಅಲ್ಲಿಗೆ ಎಂ ಸ್ಯಾಂಡ್ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಮೈದಾನವನ್ನು ಅಣಿಗೊಳಿಸಲಾಗುತ್ತದೆ ಎಂದು ತಿಳಿಸಿದರು.
ವಿಜಯದಶಮಿಯ ಶೋಭಾಯಾತ್ರೆ ಅ.8 ರಂದು ನಡೆಯಲಿದ್ದು, ಅಂದು ಸಂಜೆ 6.30 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ರಾತ್ರಿ 10.30 ಕ್ಕೆ ವಿಜಯದಶಮಿಯ ಸಭಾ ಕಾರ್ಯಕ್ರಮ ನಡೆಯಲಿದ್ದು, ಇದನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಅಪ್ಪಚ್ಚು ರಂಜನ್ ವಹಿಸಲಿದ್ದು, ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ವಿ. ಸೋಮಣ್ಣ, ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಸಿ.ಟಿ. ರವಿ, ಶಾಸಕರಾದ ಕೆ.ಜಿ.ಬೋಪಯ್ಯ, ಎಂಎಲ್‍ಸಿಗಳಾದ ಸುನಿಲ್ ಸುಬ್ರಮಣಿ, ವೀಣಾಅಚ್ಚಯ್ಯ ಸೇರಿದಂತೆ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಮಂಗಳೂರು ಸ್ವರಾಗ್ ಸೌಂಡ್ಸ್‍ನಿಂದ ಆರ್ಕೆಸ್ಟ್ರಾ- ಈ ಬಾರಿ ವಿಜಯದಶಮಿಯಂದು ರಾತ್ರಿ ಮಂಗಳೂರಿನ ಸ್ವರಾಗ್ ಸೌಂಡ್ಸ್‍ನಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಡಿಕೇರಿ ದಸರಾ ಉತ್ಸವವನ್ನು ಅಚ್ಚು ಕಟ್ಟಾಗಿ ವ್ಯವಸ್ಥಿತವಾಗಿ ನಡೆಸುವುದಕ್ಕೆ ಪೂರಕವಾಗಿ ಗಾಂಧಿ ಮೈದಾನದಲ್ಲಿ 33 ಲಕ್ಷ ವ್ಯಯಿಸಿ ಶಾಮಿಯಾನ, ಕಲಾ ಸಂಭ್ರಮ ವೇದಿಕೆಯನ್ನು ಹಾಗೂ ನಗರಾಲಂಕಾರ, ಬೀದಿ ದೀಪ, ಗ್ಯಾಲರಿಗಳ ನಿರ್ಮಾಣ ಮಾಡಲಾಗಿದೆಯೆಂದು ತಿಳಿಸಿದರು.
ದಸರಾ ಮಂಟಪಗಳಿಗೆ ತಲಾ 3.50 ಲಕ್ಷ ಅನುದಾನ- ಪ್ರಸಕ್ತ ಸಾಲಿನಲ್ಲಿ ದಸರಾ ದಶ ಮಂಟಪಗಳಿಗೆ ತಲಾ 3.50 ಲಕ್ಷ ಅನುದಾನ ಹಾಗೂ ನಾಲ್ಕು ಶಕ್ತಿ ದೇವತೆಗಳ ಕರಗಗÀಳಿಗೆ ತಲಾ 2.50 ಲಕ್ಷ ಅನುದಾನವನ್ನು ದಸರಾ ಸಮಿತಿ ನೀಡಲಿದೆಯೆಂದು ರಾಬಿನ್ ದೇವಯ್ಯ ಮಾಹಿತಿ ನೀಡಿದರು.
ಈ ಬಾರಿಯ ಶೋಭಾಯಾತ್ರೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮಂಟಪಕ್ಕೆ 20 ಗ್ರಾಂ ಚಿನ್ನ, ದ್ವಿತೀಯ ಸ್ಥಾನ ಪಡೆಯುವ ಮಂಟಪಕ್ಕೆ 14 ಗ್ರಾಂ ಚಿನ್ನ, ತೃತೀಯ ಸ್ಥಾನ ಪಡೆಯುವ ಮಂಟಪಕ್ಕೆ 10 ಗಾಂ ಚಿನ್ನ ಹಾಗೂ ಉಳಿದ ಮಂಟಪಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆಂದು ವಿವರಗಳನ್ನಿತ್ತರು.
ಇದರೊಂದಿಗೆ ಅತ್ಯಾಕರ್ಷಕವಾಗಿ ಅಲಂಕೃತಗೊಂಡ ದೇವಸ್ಥಾನಗಳಿಗೆ ಹಾಗೂ 40 ವಿವಿಧ ವಿಭಾಗಗಳ ಅಂಗಡಿ, ಮಳಿಗೆ, ಕಟ್ಟಡ, ಸರ್ಕಾರಿ ಕಟ್ಟಡಗಳ ಅಲಂಕಾರ ಸ್ಫರ್ಧೆಗಳಲ್ಲಿ ಮೊದಲ ಸ್ಥಾನ ಪಡೆಯುವವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಅಪ್ಪಚ್ಚು ರಂಜನ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಗೌರವಾಧ್ಯಕ್ಷ ಪಿ.ಡಿ. ಪೊನ್ನಪ್ಪ, ಖಜಾಂಚಿ ಉಮೇಶ್ ಸುಬ್ರಮಣಿ ಹಾಗೂ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಆರ್.ಬಿ. ರವಿ ಉಪಸ್ಥಿತರಿದ್ದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್