Monday, October 21, 2019 8:44 PM

ದೇಶ ಭಕ್ತಿ ಗೀತೆ ಗಾಯನ ಸ್ಪರ್ಧೆ : ಸಂತಮೈಕೆಲರ ಶಾಲಾ ತಂಡಕ್ಕೆ ಪ್ರಥಮ ಬಹುಮಾನ
61
ದೇಶ ಭಕ್ತಿ ಗೀತೆ ಗಾಯನ ಸ್ಪರ್ಧೆ : ಸಂತಮೈಕೆಲರ ಶಾಲಾ ತಂಡಕ್ಕೆ ಪ್ರಥಮ ಬಹುಮಾನ

ಮಡಿಕೇರಿ ಅ.15 :: ಕೊಡಗು ಪತ್ರಿಕಾ ಭವನ ಟ್ರಸ್ಟ್ ವಾರ್ಷಿಕೋತ್ಸವ ಮತ್ತು ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿತ ದೇಶ ಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ಮಡಿಕೆÉೀರಿಯ ಸಂತ ಮೈಕೆಲರ ಆಂಗ್ಲ ಮಾಧ್ಯಮ ಶಾಲೆಯ ಸಿಸ್ಟರ್ ಮೋಲಿ ಮತ್ತು ತಂಡ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ.
ಕೊಡಗು ಪತ್ರಿಕಾ ಭವನ ಟ್ರಸ್ಟ್ ವಾರ್ಷಿಕೋತ್ಸವದಲ್ಲಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಮಡಿಕೇರಿ ಪಪೂ ಕಾಲೇಜಿನ ಅಖಿಲ ಮತ್ತು ತಂಡ ಪಡೆದುಕೊಂಡರೆ, ತೃತೀಯ ಸ್ಥಾನವನ್ನು ಮಡಿಕೇರಿ ಜಿಎಂಪಿ ಶಾಲೆಯ ಕೆ.ಜಿ. ರಮ್ಯ ಮತ್ತು ತಂಡ ಪಡೆದುಕೊಂಡಿತು.
ಸ್ಪರ್ಧೆಯಲ್ಲಿ ಪಾಲ್ಗೊಂಡ ಸಂತ ಮೈಕೆಲರ ಕನ್ನಡ ಮಾಧ್ಯಮ ಶಾಲೆಯ ಸ್ಯಾಮ್ಯುವೆಲ್ ಮತ್ತು ತಂಡ, ಮಡಿಕೆÉೀರಿ ಬಿಆರ್‍ಸಿಯ ರೇಖಾ ಮತ್ತು ತಂಡ, ನಗರದ ಜಿಟಿ ವೃತ್ತದ ಸಿಎಂಸಿ ಶಾಲೆಯ ರೆಹಮತ್ ಮತ್ತು ತಂಡ, ಜನರಲ್ ತಿಮ್ಮಯ್ಯ ಶಾಲೆಯ ಪ್ರತಿಮ ಮತ್ತು ತಂಡ, ಬ್ಲಾಸಂ ಶಾಲೆಯ ಪವಿತ್ರ ಮತ್ತು ತಂಡಕ್ಕೆ ಕಿರುಕಾಣಿಕೆಯನ್ನು ನೀಡಿ ಪ್ರೋತ್ಸಾಹಿಸಲಾಯಿತು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್