Monday, June 1, 2020 11:21 AM

ಮಹಾಸಭಾ ಮುಖಂಡನ ಹತ್ಯೆ
123
ಮಹಾಸಭಾ ಮುಖಂಡನ ಹತ್ಯೆ

ಲಖನೌ ಅ.೧೮ : ಹಿಂದೂ ಮಹಾಸಭಾ ಮುಖಂಡ ಕಮಲೇಶ್ ತಿವಾರಿ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಾಡ ಹಗಲೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ತಿವಾರಿಯವರನ್ನು ತಕ್ಷಣವೇ ತುರ್ತು ಅಪಘಾತ ಚಿಕಿತ್ಸಾ ಘಟಕಕ್ಕೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ ಎಂದು ಮಾದ್ಯಮಗಳು ವರದಿ ಮಾಡಿವೆ.
ತಿವಾರಿ ಬಲಪಂಥೀಯ ಗುಂಪಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ವರದಿಗಳ ಪ್ರಕಾರ ದುಷ್ಕರ್ಮಿಗಳು ಉಡುಗೊರೆ ನೀಡುವ ನೆಪದಲ್ಲಿ ತಿವಾರಿಯವರ ಕಚೇರಿಗೆ ಆಗಮಿಸಿದ್ದಾರೆ ಖ್ರುತ್ಯ ಎಸಗಿದ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಇತ್ತೀಚೆಗೆ, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ತಿವಾರಿ ಮೇಲಿನ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿನ ಪ್ರಕರಣವನ್ನು ರದ್ದುಮಾಡಿತ್ತು. ಅಲ್ಲದೆ ತಿವಾರಿ ಇತ್ತೀಚಿನ ದಿನಗಳಲ್ಲಿ ಮಹಮದ್ ಪೈಗಂಬರ್ ಕುರಿತಂತೆ ವಿವಾದಿತ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್