Tuesday, November 12, 2019 1:49 PM

ರುಚಿಕರವಾದ ಮಟನ್ ಸುಕ್ಕ ಮಾಡುವ ವಿಧಾನ
151
ರುಚಿಕರವಾದ ಮಟನ್ ಸುಕ್ಕ ಮಾಡುವ ವಿಧಾನ

ರುಚಿಕರವಾದ ಅಡುಗೆಯನ್ನು ಮನೆಯಲ್ಲಿಯೇ ಮಾಡಬಹುದು. ಹೋಟೆಲ್​​ನಲ್ಲಿ ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ಮನೆಯಲ್ಲಿಯೇ ರುಚಿಕರವಾದ ಅಡುಗೆ ಮಾಡಿಕೊಂಡು ತಿಂದರೆ ಆರೋಗ್ಯವು ಸರಿಯಾಗಿ ಇರುತ್ತದೆ.ಮನೆಯಲ್ಲಿಯೆ ರುಚಿಕರವಾದ ಮಟನ್ ಸುಕ್ಕ ಮಾಡುವ ವಿಧಾನ…

ಬೇಕಾಗುವ ಸಾಮಾಗ್ರಿಗಳು : 1 ಕೆ .ಜಿ ಮಟನ್, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ,  2 ಈರುಳ್ಳಿ, 1 ನಿಂಬೆಹಣ್ಣು, 2 ಟೊಮೊಟೊ, ಎಣ್ಣೆ, ಕರಿಬೇವು, ಕೊತ್ತಂಬರಿ, ಹಸಿಮೆಣಸಿನಕಾಯಿ, ಕಾರದಪುಡಿ, ಗರಂಮಸಾಲ,  ಬೆಳ್ಳುಳ್ಳಿ

ಮಸಾಲೆಗೆ : 5 ಎಸಳು ಬೆಳ್ಳುಳ್ಳಿ, 2 ಇಂಚಿನಷ್ಟು1 ಚಮಚ ಜೀರಿಗೆ, 100 ಗ್ರಾಂ ಚಿಕ್ಕ ಈರುಳ್ಳಿ, ಅರ್ಧ ಕಪ್‌ ನೀರು, ಇಷ್ಟು ಸಾಮಗ್ರಿ ಹಾಕಿ ಪೇಸ್ಟ್‌ ಮಾಡಿ ಇಡಿ.

ಮಟನ್ ಸುಕ್ಕ ಮಾಡುವ ವಿಧಾನ : ಮಟನ್‌ ಅನ್ನು ಚೆನ್ನಾಗಿ ತೊಳೆಯಬೇಕು ನಂತರ ಅದನ್ನು ಸಣ್ಣ ಉರಿಯಲ್ಲಿ ಬೇಯಿಸಿ, ಅದರಲ್ಲಿರುವ ನೀರು ಬತ್ತಲಿ, ನಂತರ ಅದನ್ನು ಉರಿಯಿಂದ ಇಳಿಸಿ ಇಡಿ.

ನಂತರ ಮತ್ತೊಂದು ಪ್ಯಾನ್‌ ಅನ್ನು ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕರಿಬೇವು ಮತ್ತು ಕಟ್ ಮಾಡಿಕೊಂಡ ಈರುಳ್ಳಿ ಅರಿಶಿಣವನ್ನು ಹಾಕಿ, ನಂತರ ಚಕ್ಕೆ, ಲವಂಗ, ಏಲಕ್ಕಿ, ನಕ್ಷತ್ರ ಮೊಗ್ಗುನ್ನು 2 ನಿಮಿಷ ಫ್ರೈ ಮಾಡಿ. , ಹಸಿ ಮೆಣಸು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಟೊಮೆಟೊ ಹಾಕಿ 5 ನಿಮಿಷ ಫ್ರೈ ಮಾಡಿ ನಂತರ ಬೇಯಿಸಿದ ಮಟನ್‌ ಅನ್ನು ಫ್ರೈ ಮಾಟಿಕೊಂಡ ಮಸಾಲೆಗೆ ಹಾಕಿ ಮಿಕ್ಸ್ ಮಾಡಬೇಕು.

ಇಷ್ಟೇಲ್ಲ ಆದ ನಂತರ 10 ನಿಮಿಷ ಮತ್ತೆ ಬೇಯಿಸಬೇಕು, ಕೊನೆಯಲ್ಲಿ ಕಟ್​ ಮಾಡಿಕೊಂಡ ನಿಂಬೆಹಣ್ಣನ್ನು ಬೇಯಿಸಿದ ಮಟನ್​ ಸುಕ್ಕಕ್ಕೆ ಮಿಕ್ಸ್​ ಮಾಡಬೇಕು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್