Saturday, December 14, 2019 10:01 AM

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರ ಸ್ವೀಕಾರ
190
ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರ ಸ್ವೀಕಾರ

ಮಡಿಕೇರಿ ಅ.21: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷರಾದ ಪಾರ್ವತಿ ಅಪ್ಪಯ್ಯ, ಸದಸ್ಯರಾದ ಜಾನಕಿ ಮಾಚಯ್ಯ, ಬಬ್ಬೀರ ಸರಸ್ವತಿ, ಶಂಭಯ್ಯ, ಪಡಿಞಂಡ ಪ್ರಭುಕುಮಾರ್, ಮೇಚಿರ ಸುಭಾಷ್ ನಾಣಯ್ಯ ಅವರು ಅಧಿಕಾರ ವಹಿಸಿಕೊಂಡರು.
ನಗರದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಅಧ್ಯಕ್ಷರಾದ ಪಾರ್ವತಿ ಅಪ್ಪಯ್ಯ ಅವರು ಗ್ರಾಮೀಣ ಮಟ್ಟದಲ್ಲಿ ಕಲೆ ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಜೊತೆಗೆ ವಿಶೇಷವಾಗಿ ಕಲೆಗೆ ಸಂಬಂಧಪಟ್ಟ ಹಿರಿಯರನ್ನು ಗೌರವಿಸಿ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡುವ ಕಾರ್ಯಕ್ರಮ ಆಯೋಜಿಸಬೇಕಿದೆ ಎಂದರು.
ಜಿಲ್ಲೆಯ ಮತ್ತು ಹೊರ ಜಿಲ್ಲೆಗಳಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ‘ಕೊಡವ ಸಾಹಿತ್ಯ ವಿಶ್ವ ಸಮ್ಮೇಳನ’ ನಡೆಸುವ ಬಗ್ಗೆ ಆಶಯ ವ್ಯಕ್ತಪಡಿಸಿದರು.
ಸದಸ್ಯರಾದ ಬಬ್ಬೀರ ಸರಸ್ವತಿ ಅವರು ಮಾತನಾಡಿ ಕೊಡವ ಭಾಷಿಕ ಎಲ್ಲಾ ಸಮಾಜಗಳನ್ನು ಗುರುತಿಸಿ ಕಲೆ ಸಂಸ್ಕøತಿಯನ್ನು ಪ್ರೋತ್ಸಾಹಿಸಬೇಕು. ಕೊಡವ ಭಾಷಿಕ ಜನಾಂಗದವರ ಕೊಡುಗೆ ಅಪಾರ. ಕೊಡವ ಭಾಷಿಕ ಕಲೆ ಸಂಸ್ಕøತಿಗೆ ತಮ್ಮದೇ ಆದ ಕೊಡುಗೆ ನೀಡಿರುವ ಕೆಂಬಟ್ಟಿ, ಮೇದ, ಕುಡಿಯ ಜನಾಂಗದವರನ್ನು ಮುಖ್ಯವಾಹಿನಿಗೆ ತರಬೇಕು ಎಂದರು.

ಮೇಚಿರ ಸುಭಾಷ್ ನಾಣಯ್ಯ ಅವರು ಮಾತನಾಡಿ ಕೊಡವ ಹಾಗೂ ಕೊಡವ ಭಾಷಿಕ ಜನಾಂಗದ ಸಮಗ್ರ ಏಳಿಗೆಗೆ ಮುಂದ್ ಮನೆ ಮತ್ತು ಐನ್ ಮನೆ ಕಾರ್ಯಕ್ರಮ ಆಯೋಜಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.
ಪಾರಂಪರಿಕ ಜೀವನ ಶೈಲಿಯ ದಾಖಲೆಗಳನ್ನು ಪ್ರಕಟಗೊಳಿಸುವುದರ ಜೊತೆಗೆ ಡಿಜಿಟಲೀಕರಣ ಮಾಡಬೇಕಿದೆ ಎಂದು ಅವರು ನುಡಿದರು.
ಪ್ರಭುಕುಮಾರ್ ಅವರು ಮಾತನಾಡಿ ಎಲ್ಲಾ ಜನಾಂಗದವರು ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಬೇಕು. ಆಟ್‍ಪಾಟ್ ಪಡಿಪು, ಜಾನಪದೀಯ, ಸಾಂಸ್ಕøತಿಕ, ಪಾರಂಪರಿಕ ಕಾರ್ಯಕ್ರಮ ಆಯೋಜಿಸಬೇಕಿದೆ ಎಂದು ಅವರು ಹೇಳಿದರು. ನಿಕಟಪೂರ್ವ ಸದಸ್ಯರಾದ ಬೊಳ್ಳಜಿರ ಅಯ್ಯಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್ ಇತರರು ಇದ್ದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್