Monday, June 1, 2020 12:15 PM

ಮಡಿಕೇರಿಯಲ್ಲಿ ವಿಭಾಗ ಮಟ್ಟದ ಹಾಕಿ ಪಂದ್ಯಾವಳಿಗೆ ಚಾಲನೆ
143
ಮಡಿಕೇರಿಯಲ್ಲಿ ವಿಭಾಗ ಮಟ್ಟದ ಹಾಕಿ ಪಂದ್ಯಾವಳಿಗೆ ಚಾಲನೆ

ಮಡಿಕೇರಿ ಅ.21 :
ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಇಬನ್ನಿವಳವಾಡಿ ಬೋಯಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ವಿಭಾಗ ಮಟ್ಟದಲ್ಲಿ ಹಾಕಿ ಪಂದ್ಯಾವಳಿಗೆ ಸೋಮವಾರ ಚಾಲನೆ ದೊರೆಯಿತು.
ನಗರದ ಸಾಯಿ ಟರ್ಫ್ ಹಾಕಿ ಮೈದಾನದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಹಾಕಿ ಪಂದ್ಯಾವಳಿಗೆ ಜಿ.ಪಂ.ಸಿಇಒ ಕೆ.ಲಕ್ಷ್ಮೀ ಪ್ರೀಯಾ ಅವರು ದ್ವಜಾರೋಹಣ ನೆರೆವೆರಿಸಿ ಚಾಲನೆ ನೀಡಿದರು. ನಂತರ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು ಮಾತನಾಡಿ ಕ್ರೀಡಾಪಟುಗಳು ಸದೃಡ ಮನಸ್ಸು ಮತ್ತು ದೇಹ ಹೊಂದಿರುತ್ತಾರೆ. ದೇಹವನ್ನು ದಂಡಿಸಿದಾಗ ನಾವು ಸದೃಡ ವ್ಯಕ್ತಿಗಳಾಗಲು ಸಾಧ್ಯ. ಕ್ರೀಡೆ ಸದೃಡತೆ ತರಲು ಸಾಧ್ಯ. ಆದ್ದರಿಂದ ಎಲ್ಲರೂ ಕ್ರೀಡೆಗಳಲ್ಲಿ ಭಾಗವಹಿಸುವಂತಾಗಬೇಕು ಎಂದರು.
ತಾ.ಪಂ.ಅಧ್ಯಕ್ಷ್ಷರಾದ ತೆಕ್ಕೆಡೆ ಶೋಭಾ ಮೋಹನ್ ಅವರು ಮಾತನಾಡಿಸೋಲು ಗೆಲುವು ಸಾಮಾನ್ಯವಾಗಿದ್ದು, ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಇಂತಹ ಮೈದಾನದಲ್ಲಿ ಆಟವಾಡಿ ಉತ್ತಮ ಅನುಭವ ಪಡೆಯಬೇಕು ಎಂದರು.
ಪ್ರತಿಯೊಬ್ಬರೂ ಸ್ಪೂರ್ತಿಯಿಂದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕು ಎಂದು ಕ್ರೀಡಾಪಟುಗಳಲ್ಲಿ ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎನ್.ಗಾಯಿತ್ರಿ, ಎಚ್.ಕೆ.ಪಾಂಡು, ದೈಹಿಕ ಶಿಕ್ಷಣ ಅಧಿಕಾರಿ ಎಸ್‍ಟಿ.ವೆಂಕಟೇಶ್, ಮತ್ತ್ತಿತರರು ಪಾಲ್ಗೊಂಡಿದ್ದರು. ಕೆ.ಎಸ್.ಹರೀಶ್ ಪ್ರಾರ್ಥಿಸಿದರು. ಎಸ್.ಟಿ.ವೆಂಕಟೇಶ್ ಸ್ವಾಗತಿಸಿದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್