Wednesday, November 13, 2019 10:05 AM

ಶಿಕ್ಷಣ ಕಾರ್ಯಾಗಾರ : ಸಹಕಾರ ಸಂಘಗಳ ಬಲವರ್ಧನೆಗೆ ಕೈಜೋಡಿಸಿ : ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಮನುಮುತ್ತಪ್ಪ ಕರೆ
53
ಶಿಕ್ಷಣ ಕಾರ್ಯಾಗಾರ : ಸಹಕಾರ ಸಂಘಗಳ ಬಲವರ್ಧನೆಗೆ ಕೈಜೋಡಿಸಿ : ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಮನುಮುತ್ತಪ್ಪ ಕರೆ

ಮಡಿಕೇರಿ ಅ.21 :
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪ್ಯಾಕ್ಸ್, ಪಿಕಾರ್ಡ್ ಬ್ಯಾಂಕ್, ಎಪಿಸಿಎಂಎಸ್., ಪಟ್ಟಣ ಸಹಕಾರ ಬ್ಯಾಂಕ್, ಪತ್ತಿನ ಸಹಕಾರ ಸಂಘ ಹಾಗೂ ಮಾರಾಟ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಚುನಾವಣೆ ಹಾಗೂ ಸಹಕಾರ ಸಂಘಗಳಲ್ಲಿ ದುರುಪಯೋಗದ ಕುರಿತು ಶಿಕ್ಷಣ ಕಾರ್ಯಕ್ರಮವು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಎ.ಕೆ.ಮನು ಮುತ್ತಪ್ಪ ಅವರು ಮಾತನಾಡಿ ಕೊಡಗು ಜಿಲ್ಲಾ ಸಹಕಾರ ಯುನಿಯನ್‍ನಿಂದ ಪ್ರತಿ ವರ್ಷ ಸಹಕಾರ ಕೇಂದ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದ್ದು, ಚುನಾವಣೆ, ಲೆಕ್ಕ ಪರಿಶೋಧನೆ ಕುರಿತು ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಸಹಕಾರ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ದುಡಿದು ಅನೇಕ ವರ್ಷ ಕಳೆದಿದ್ದೇವೆ. ಕೊಡಗಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆದಿದೆ. ಇಂತಹ ಸಹಕಾರಿಗಳು ಯಾವುದೇ ಫಲಾಪೇಕ್ಷೆ ಬಯಸುವುದಿಲ್ಲ. ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳಲ್ಲಿ ಸಪ್ತಾಹದ ಸಂದರ್ಭದಲ್ಲಿ ದುಡಿದ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಗುತ್ತಿದೆ ಎಂದು ಅವರು ಹೇಳಿದರು.
ಯೂನಿಯನ್‍ಗೆ ಆರ್ಥಿಕ ಬೆಂಬಲ ನೀಡಲು ಡಿಸಿಸಿ ಬ್ಯಾಂಕ್‍ನ್ನು ಕೋರಲಾಗುತ್ತಿದೆ. 25 ಸಾವಿರಗಳನ್ನು ಘೋಷಣೆ ಮಾಡಿರುವುದಕ್ಕೆ ಅಭಿನಂದನಾರ್ಹ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‍ನ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷರಾದ ಬಾಂಡ್ ಗಣಪತಿ ಅವರು ಮಾತನಾಡಿ ಚುನಾವಣೆ ಹಾಗೂ ಸಹಕಾರ ಸಂಘಗಳ ಬೆಳವಣಿಗೆ ಕುರಿತ ಶಿಕ್ಷಣ ಕಾರ್ಯಕ್ರಮ ಸದುಪಯೋಗಪಡಿಸಿಕೊಳ್ಳಿ ಎಂದು ಅವರು ಸಲಹೆ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಒಳ್ಳೆಯದು ಕಲಿಯಲು ಅವಕಾಶ ಇದ್ದರು, ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಲು ಹಿಂಜರಿಯುತ್ತಾರೆ. ಈ ತರಬೇತಿಯ ಅರಿವು ಪ್ರತಿಯೊಬ್ಬರಲ್ಲಿಯೂ ಇರಬೇಕು. ನಾವು ಎಲ್ಲವನ್ನು ಕಲಿತುಕೊಂಡಿದ್ದೇವೆ ಎಂಬ ಮನಸ್ಸಿನಲ್ಲಿರುವ ಅಭಿಪ್ರಾಯವನ್ನು ಬಿಟ್ಟು ಇನ್ನೂ ಕಲಿಯಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲಿರಬೇಕು. ಕಲಿಕೆಗೆ ಅನೇಕ ವಿಷಯಗಳು, ಸಂಧರ್ಭ ಸನ್ನಿವೇಶಗಳು ಒದಗಿ ಬಂದಾಗ ಅವುಗಳನ್ನು ಸದುಪಯೋಗ ಪಡಿಸಿಕೊಂಡು ಕಲಿಯುವುದು ಮನುಷ್ಯನ ಧರ್ಮ ಎಂದು ಅವರು ಹೇಳಿದರು.
ಸಹಕಾರ ಸಂಘಗಳಲ್ಲಿ ತಿಂಗಳಿಗೊಮ್ಮೆ ಆಡಿಟ್ ಮಾಡಲಾಗುತ್ತಿದೆ. ತಿಂಗಳಲ್ಲಿ ಮಹಾಸಭೆಯನ್ನು ಮಾಡುವುದರಿಂದ ಕೆಲವು ನ್ಯೂನ್ಯತೆ ತಡೆಗಟ್ಟಬಹುದು. ಇದರಿಂದ ಸಂಸ್ಥೆಯಲ್ಲಿ ಉತ್ತಮ ಕೆಲಸ ಮಾಡಿದರೆ ಯಾವುದೇ ರೀತಿಯ ದುರುಪಯೋಗವಾಗುವುದಿಲ್ಲ ಎಂದು ಅವರು ಹೇಳಿದರು.
25 ಸಾವಿರ ರೂ.ಗಳನ್ನು ಪ್ರತಿ ಸಂಘಗಳಿಗೆ ಸಪ್ತಾಹ ಮಾಡಲು ನೇರವಾಗಿ ನೀಡಲಾಗುವುದು ಎಂದು ಬಾಂಡ್ ಗಣಪತಿ ಅವರು ಹೇಳಿದರು.
ಮಂಗಳೂರು ವೃತ್ತದ ಸಹಕಾರ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್ ಅವರು ಚುನಾವಣೆ ಹಾಗೂ ಸಹಕಾರ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ದುರುಪಯೋಗ ಹಾಗೂ ನಿಯಂತ್ರಣದ ಕುರಿತು ಉಪನ್ಯಾಸ ನೀಡಿದರು.
ಉಪಾಧ್ಯಕ್ಷರಾದ ಪಿ.ಸಿ.ಅಚ್ಚಯ್ಯ, ಎಸ್.ಪಿ.ನಿಂಗಪ್ಪ, ಎಚ್.ಎನ್.ರಾಮಚಂದ್ರ, ಎನ್.ಎ. ರವಿಬಸಪ್ಪ, ಕನ್ನಂಡ ಸಂಪತ್ ಮತ್ತಿತರು ಪಾಲ್ಗೊಂಡಿದ್ದರು. ಮಂಜುಳ ಅವರು ಪ್ರಾರ್ಥಿಸಿದರು. ಯೋಗೇಂದ್ರ ನಾಯಕ್ ಅವರು ನಿರೂಪಿಸಿ, ವಂದಿಸಿದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್