Tuesday, November 12, 2019 1:52 PM

ಆಲೂಪಲಾವ್ ಮಾಡುವ ವಿಧಾನ
133
ಆಲೂಪಲಾವ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : ಚಿಕ್ಕದಾಗಿ ಕತ್ತರಿಸಿದ ಆಲೂಗೆಡ್ಡೆ 2, ಜೀರಿಗೆ 1 ಚಮಚ, ಬಾಸುಮತಿ ಅಕ್ಕಿ 1/2, ಒಂದು ಬೆಳ್ಳುಳ್ಳಿ ಮತ್ತು 1 ಪಲಾವ್ ಎಲೆ, 1/2 ಚಮಚ ಕಲ್ಲುಪ್ಪು, ಹಸಿ ಏಲಕ್ಕಿ 1, ದಾಲ್ಚಿನ್ನಿ ಸ್ವಲ್ಪ, ಶುಂಠಿ ಪೇಸ್ಟ್ 1 ಚಮಚ, 4-5 ಪುದೀನ ಎಲೆ, ಹಸಿಮೆಣಸು 2, ಕೊತ್ತಂಬರಿ ಅಲಂಕಾರಕ್ಕೆ, ಕೆಂಪು ಮೆಣಸಿನ ಪುಡಿ 1/2 ಚಮಚ, ಸ್ವಲ್ಪ ತೆಂಗಿನ ತುರಿ, ಹುಣಸೆ ಹುಳಿ ರಸ 1 ಚಮಚ, ನೀರು 3 ಕಪ್.

ಮಾಡುವ ವಿಧಾನ:

1. ತೆಂಗಿನ ತುರಿ, ಕೊತ್ತಂಬರಿ, ಹುಣಸೆ ರಸ , ಬೆಳ್ಳುಳ್ಳಿ, ಏಲಕ್ಕಿ, ಡಾಲ್ಚಿನ್ನಿ, ಪುದೀನ ಸ್ವಪ್ಪುನ್ನು ಮಿಕ್ಸಿಯಲ್ಲಿ ಹಾಕಿ ಅರೆಯಿರಿ.

2. ಅದರಲ್ಲಿ ಜೀರಿಗೆ, ಶುಂಠಿ, ಪಲಾವ್ ಎಲೆ ಹಾಕಿ ತುಪ್ಪದಲ್ಲಿ ಹುರಿಯಿರಿ.

3. ನಂತರ ಅದರಲ್ಲಿ ಅಕ್ಕಿ ಹಾಕಿ ಸ್ವ ಲ್ಪ ಹೊತ್ತು ಹುರಿಯಿರಿ.

4. ಈಗ ನೀರು ಹಾಕಿ , ಕತ್ತರಿಸಿದ ಆಲೂಗೆಡ್ಡೆ , ಮೆಣಸಿನ ಪುಡಿ, ಉಪ್ಪು ಕಾಕಿ ಪ್ರೆಶರ್ ಕುಕ್ಕರ್ ನಲ್ಲಿ 3 ವಿಶಲ್ ಬರುವರೆಗೂ ಬೇಯಿಸಿ. ಈಗ ರುಚಿಕರವಾದ ಆಲೂಪಲಾವ್ ರೆಡಿ.

5. ಆಲೂಪಲಾವ್ ಅನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ ಬಿಸಿಬಿಸಿ ಇರುವಾಗಲೇ ತಿನ್ನಲು ನೀಡಿ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್