Tuesday, November 12, 2019 2:16 PM

ಸೋಮವಾರಪೇಟೆ ಗ್ರಾಮೀಣ ಭಾಗಕ್ಕೆ ಬಂತು ಸರಕಾರಿ ಬಸ್
87
ಸೋಮವಾರಪೇಟೆ ಗ್ರಾಮೀಣ ಭಾಗಕ್ಕೆ ಬಂತು ಸರಕಾರಿ ಬಸ್

ಸೋಮವಾರಪೇಟೆ ಅ. 25 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ತಾಲೂಕಿನ ಗ್ರಾಮೀಣ ಭಾಗಕ್ಕೆ ನೂತನ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಬೆಳಿಗ್ಗೆ 8.15ಕ್ಕೆ ಸೋಮವಾರಪೇಟೆಯಿಂದ ಹೊರಟು ಬಸವನಕಟ್ಟೆ-ನಗರಳ್ಳಿ-ಕೂತಿ-ತೋಳೂರುಶೆಟ್ಟಳ್ಳಿ ಮಾರ್ಗವಾಗಿ ಹಾಸನಕ್ಕೆ ತೆರಳಲಿದೆ. ಸಂಜೆ 4.15ಕ್ಕೆ ಹಾಸನದಿಂದ ಹೊರಟು ಅದೇ ಮಾರ್ಗವಾಗಿ ಸೋಮವಾರಪೇಟೆಗೆ ಬಂದು ಜಿಲ್ಲಾ ಕೇಂದ್ರ ಮಡಿಕೇರಿಗೆ ತೆರಳಲಿದೆ.
ನೂತನ ಬಸ್ ಮಾರ್ಗಕ್ಕೆ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ತಾ.ಪಂ.ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮತ್ತಿತರರು ಚಾಲನೆ ನೀಡಿದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್