Tuesday, November 12, 2019 1:49 PM

ವಾಯುಮಾಲಿನ್ಯದಿಂದ ಅಪರಾಧ ದರದಲ್ಲಿ ಹೆಚ್ಚಳ : ಸಂಶೋಧನೆ
10
ವಾಯುಮಾಲಿನ್ಯದಿಂದ ಅಪರಾಧ ದರದಲ್ಲಿ ಹೆಚ್ಚಳ : ಸಂಶೋಧನೆ

ವಾಶಿಂಗ್ಟನ್ : ವಾಯುಮಾಲಿನ್ಯ ಮತ್ತು ಹಿಂಸಾತ್ಮಕ ಅಪರಾಧಗಳ ನಡುವೆ ಅವಿನಾಭಾವ ಸಂಬAಧವಿದೆ ಎನ್ನುವುದನ್ನು ಅಮೆರಿಕದ ಸಂಶೋಧಕರು ಕಂಡುಕೊAಡಿದ್ದಾರೆ. ಹೆಚ್ಚಿನ ಪ್ರಮಾಣದ ಪರ್ಟಿಕ್ಯುಲೇಟ್ ಮ್ಯಾಟರ್ ಮತ್ತು ಓಝೋನ್ ಹಲ್ಲೆಗಳು ಮುಂತಾದ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತವೆ ಎನ್ನುವುದನ್ನು ಅಧ್ಯನವೊಂದು ತೋರಿಸಿದೆ. ವಾಯುಮಾಲಿನ್ಯವು ಆಯುಷ್ಯ ಕುಸಿತ ಮುಂತಾದ ದೀರ್ಘಾವಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವುದು ಈಗಾಗಲೇ ದೃಢಪಟ್ಟಿದೆ. ಈಗ ವಾಯುಮಾಲಿನ್ಯಕ್ಕೆ ಸಂಬAಧಿಸಿದ ಹೊಸ ಅಪಾಯಗಳನ್ನು ಪತ್ತೆಹಚ್ಚಲಾಗಿದೆ. ವಾಯುಮಾಲಿನ್ಯವು ಜನರನ್ನು ಹೆಚ್ಚೆಚ್ಚು ಹಿಂಸಾತ್ಮಕಗೊಳಿಸುತ್ತದೆ ಎಂಬ ಇಂಗಿತವನ್ನು ಅಧ್ಯಯನ ವ್ಯಕ್ತಪಡಿಸಿದೆ.
ಅಮೆರಿಕದ 397 ಕೌಂಟಿಗಳ 2006 ಮತ್ತು 2013ರ ನಡುವಿನ ಅಪರಾಧ ಮತ್ತು ಪರಿಸರ ದತ್ತಾಂಶಗಳ ವಿಶ್ಲೇಷಣೆ ನಡೆಸಿದ ಬಳಿಕ ಸಂಶೋಧಕರು ಈ ನಿರ್ಧಾರಕ್ಕೆ ಬಂದಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್