Tuesday, November 12, 2019 2:29 PM

ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ : ಗ್ರಾಮಸ್ಥರಿಂದ ಪ್ರತಿಭಟನೆ
43
ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ : ಗ್ರಾಮಸ್ಥರಿಂದ ಪ್ರತಿಭಟನೆ

ಸೋಮವಾರಪೇಟೆ ನ. 6 : ಕಳೆದ ಕೆಲವು ತಿಂಗಳಿAದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಈ ವರೆಗೂ ಪರಿಹರಿಸಿಲ್ಲ ಎಂದು ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರು-ಬಸವನಹಳ್ಳಿ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಳೆದ ಕೆಲವು ತಿಂಗಳಿAದ ಸರಿಯಾಗಿ ಕುಡಿಯುವ ನೀರಿನ ಸರಬರಾಜು ಮಾಡುತ್ತಿಲ್ಲ. ಸಿಗುತ್ತಿರುವ ಅಲ್ಪಸ್ವಲ್ಪ ನೀರು ಕುಡಿಯಲು ಆಯೋಗ್ಯವಾಗಿದೆ. ಈ ಬಗ್ಗೆ ಗ್ರಾ.ಪಂ. ಅಧಿಕಾರಿಗಳಲ್ಲಿ ಅನೇಕ ಬಾರಿ ಮೌಖಿಕವಾಗಿ ಮನವಿ ಮಾಡಿಕೊಂಡಿದ್ದರೂ ಸ್ಪಂಧಿಸಿಲ್ಲ. ಅದರೊಂದಿಗೆ ನೀರುಗಂಟಿ ಕೂಡ ಗ್ರಾಮಸ್ಥರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ. ಕೂಡಲೇ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದರೊಂದಿಗೆ ನೀರುಗಂಟಿಯನ್ನು ಬದಲಾಯಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನಾ ಮನವಿಗೆ ಸ್ಪಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚನ್ನಕೇಶವ ಅವರು, ಗ್ರಾಮಕ್ಕೆ ನೀರು ಸರಬರಾಜಿಗಾಗಿ 2 ಕೊಳವೆ ಬಾವಿ ಇದೆ. ಒಂದರಲ್ಲಿ ಮೋಟಾರು ಪಂಪ್ ಬಿದ್ದು, ನೀರೆತ್ತಲು ಸಮಸ್ಯೆಯಾಗಿದೆ. ಇನ್ನೊಂದು ಕೊಳವೆ ಬಾವಿಯ ನೀರು ಉಪಯೋಗಿಲು ಉತ್ತಮವಾಗಿಲ್ಲ. ಈ ಸಮಸ್ಯೆಯನ್ನು ಪಂಚಾಯಿತಿ ಗಂಭೀರವಾಗಿ ಪರಿಗಣಿಸಿದ್ದು, ನೂತನವಾಗಿ ಒಂದು ಕೊಳವೆ ಬಾವಿಯನ್ನು ಇದೀಗ ಕೊರೆಯಿಸಿದ್ದು, ಮುಂದಿನ ಒಂದು ವಾರದೊಳಗೆ ಅಂದರೆ ನವೆಂಬರ್ 12ರೊಳಗೆ ಪರಿಹರಿಸುವುದಾಗಿ ಹಾಗೂ ನೀರುಗಂಟಿಯ ಬದಲಾವಣೆ ಬಗ್ಗೆ ಚರ್ಚಿಸಿ, ಕ್ರಮಕೈಗೊಳ್ಳಲಾಗುವುದು ಎಂದು ಬರವಸೆ ನೀಡಿದರು. ಇದಕ್ಕೆ ಮಣಿಯದ ಪ್ರತಿಭಟನಾಕಾರರು, ತಾವು ನೀಡುತ್ತಿರುವ ಬರವಸೆಯನ್ನು ಲಿಖಿತವಾಗಿ ನೀಡಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಲಿಖಿತವಾಗಿ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್ ಹಾಜರಿದ್ದು ಪ್ರತಿಭಟನಾಕಾರರ ಮನವಿಗೆ ಸ್ಪಂಧಿಸಿದರು.
ಪ್ರತಿಭಟನೆಯಲ್ಲಿ ಬೇಳೂರು-ಬಸವನಹಳ್ಳಿ ಗ್ರಾಮದ ಶ್ರೀಕಂಠ, ಬಿ. ಫರ್ನಾಂಡೀಸ್, ಬಿ.ಎನ್. ಬಸವರಾಜು, ಮಣಿಕಂಠ, ಲೋಕೇಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್