Tuesday, November 12, 2019 1:52 PM

ಬಸಳೆ ಸೊಪ್ಪಿನ ಸಾರು ಮಾಡುವ ವಿಧಾನ
48
ಬಸಳೆ ಸೊಪ್ಪಿನ ಸಾರು ಮಾಡುವ ವಿಧಾನ

ಬಸಳೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಬಸಳೆ ಸೊಪ್ಪಿನ ಜೊತೆ ಬೇಳೆ, ತೊಗರಿ ಬೇಳೆ ಅಥವಾ ಹೆಸರು ಕಾಳು ಹಾಕಿ ತಯಾರಿಸಿದರೆ ಬಸಳೆ ಸಾರಿನ ರುಚಿ ಹೆಚ್ಚುವುದು.

ಬೇಕಾಗುವ ಸಾಮಗ್ರಿಗಳು: ಬಸಳೆ ಸೊಪ್ಪು ಒಂದು ಕಟ್ಟು, ಮೊಳಕೆ ಬರಿಸಿದ ಹೆಸರು ಕಾಳು 1 ಕಪ್ಈ, ರುಳ್ಳಿ 2 (ಕತ್ತರಿಸಿದ) ಟೊಮೆಟೊ 2 (ಕತ್ತರಿಸಿದ), ಹುಣಸೆಹಣ್ಣಿನ ರಸ ( ಒಂದು ನಿಂಬೆ ಗಾತ್ರ ಹುಣಸೆ ಹಣ್ಣಿನ ಉಂಡೆ ತಗೊಂಡು ಅದನ್ನು ನೀರಿನಲ್ಲಿ ಹಿಂಡಿ ರಸ ತೆಗೆದು ಹಿಂಡಬೇಕು), ರುಚಿಗೆ ತಕ್ಕ ಉಪ್ಪು, ಎಣ್ಣೆ, ಕರಿಬೇವು, ಸಾಸಿವೆ, ಬೆಳ್ಳುಳ್ಳಿ,

ಮಸಾಲೆಗೆ: ತೆಂಗಿನಕಾಯಿ ತುರಿ – 1 ಕಪ್ಒಣ ಕೆಂಪು ಮೆಣಸಿನ ಕಾಯಿ – 5-6 ಅಥವಾ ಒಂದೂವರೆ ಚಮಚ ಮೆಣಸಿನ ಪುಡಿ, ಕೊತ್ತಂಬರಿ ಬೀಜ – 2 ಚಮಚ ಅಥವಾ 1/2 ಚಮಚ ಕೊತ್ತಂಬರಿ ಪುಡಿ, ಜೀರಿಗೆ – 1 ಚಮಚ
ಮೆಂತೆ – 6-8 ಬೀಜ, ಅರಿಶಿಣ ಪುಡಿ 1/4 ಚಮಚ

ತಯಾರಿಸುವ ವಿಧಾನ:1. ಬಸಳೆ ಸೊಪ್ಪನ್ನು ಸ್ವಚ್ಛಗೊಳಿಸಿ , ಅದನ್ನು ಮೊಳಕೆ ಬರಿಸಿದ ಕಾಳು, ಈರುಳ್ಳಿ, ಟೊಮೆಟೊ ಮತ್ತು ಸ್ವಲ್ಪ ನೀರು ಮತ್ತು ಸ್ವಲ್ಪ ಉಪ್ಪುಹಾಕಿ ಬೇಯಿಸಲು ಇಡಬೇಕು.

2. ನಂತರ ಮಸಾಲೆ ಸಾಮಾಗ್ರಿಗಳನ್ನು ಹಾಕಿ ನುಣ್ಣನೆ ರುಬ್ಬಬೇಕು. ಹೀಗೆ ರುಬ್ಬುವ ಮುನ್ನ ತೆಂಗಿನ ತುರಿ ಚೆನ್ನಾಗಿ ಹುರಿದು, ಅದಕ್ಕೆ ಉಳಿದ ಸಾಮಾಗ್ರಿಗಳನ್ನು ಸೇರಿಸಿ ಸ್ವಲ್ಪ ಹೊತ್ತು ಹುರಿದು ನಂತರ ಅರೆದರೆ ಮಸಾಲೆ ರುಚಿ ಹೆಚ್ಚುವುದು.

3. ಈಗ ಬೇಯುತ್ತಿರುವ ಬಸಳೆ ಸೊಪ್ಪು , ಹೆಸರು ಕಾಳಿನ ಮಿಶ್ರಣಕ್ಕೆ ರುಬ್ಬಿದ ಮಸಾಲೆ ಮತ್ತು ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಹುಣಸೆ ಹಣ್ಣಿನ ರಸ ಸೇರಿಸಿ , ಸ್ವಲ್ಪ ಹೊತ್ತು ಕುದಿಸಿ ಉರಿಯಿಂದ ಸಾರು ಪಾತ್ರೆಯನ್ನು ಇಳಿಸಿ ಬದಿಯಲ್ಲಿಡಬೇಕು.

4. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ , ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಬೇಕು, ಸಾಸಿವೆ ಚಟಪಟಾ ಶಬ್ದ ಬರುವಾಗ ಕರಿಬೇವು ಮತ್ತು ಬೆಳ್ಳುಳ್ಳಿ ಹಾಕಿ, ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬರುವಾಗ ಈ ಒಗ್ಗರಣೆಯನ್ನು ಬಿಸಿಯಾದ ಸಾರಿಗೆ ಹಾಕಿ ಒಮ್ಮೆ ತಿರುಗಿಸಿದರೆ ರುಚಿಕರವಾದ ಬಸಳೆ ಸೊಪ್ಪಿನ ಸಾರು ರೆಡಿ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್