Sunday, January 19, 2020 7:22 AM

ಭಾರತೀಯ ಚಿತ್ರನಟ ಕಮಲ್ ಹಾಸನ್
79
ಭಾರತೀಯ ಚಿತ್ರನಟ ಕಮಲ್ ಹಾಸನ್

ಕಮಲ್ ಹಾಸನ್ (ತಮಿಳು:கமல்ஹாசன், ಜನನ: ನವೆಂಬರ್ ೭, ೧೯೫೪) ಒಬ್ಬ ಭಾರತೀಯ ಚಿತ್ರನಟ, ಚಿತ್ರಕಥೆ ರಚನೆಕಾರ ಮತ್ತು ನಿರ್ಮಾಪಕಭಾರತೀಯ ಚಲನಚಿತ್ರರಂಗದಲ್ಲಿ ಪ್ರಮುಖ ಮೆಥಡ್ ಆಕ್ಟರ್‌ಗಳಲ್ಲೊಬ್ಬರು ಎಂದು ಪರಿಗಣಿಸಲ್ಪಡುವ ಒಬ್ಬ ಮಹಾನ್ ತಾರೆ. ಕಮಲ್ ಹಾಸನ್ ರವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನೊಳಗೊಂಡ ಹಲವಾರು ಭಾರತೀಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸುವುದರ ಮೂಲಕ ಚಿರಪರಿಚಿತರು. ಉತ್ತಮ ವಿದೇಶಿ ಚಿತ್ರಕ್ಕಾಗಿ ನೀಡುವ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗುವ ಚಿತ್ರಗಳಲ್ಲಿ ಹೆಚ್ಚಿನವು ಕಮಲ್ ಹಾಸನ್ ನಟಿಸಿದ ಚಿತ್ರಗಳಾಗಿರುವುದು ವಿಶೇಷ. ನಟನೆ ಹಾಗೂ ನಿರ್ದೇಶನದ ಜೊತೆಗೆ, ಅವರು ಚಿತ್ರಕಥೆಗಾರಸಾಹಿತ್ಯ ರಚನೆಕಾರ ,ಹಿನ್ನೆಲೆ ಗಾಯಕ ಮತ್ತು ನೃತ್ಯ ನಿರ್ದೇಶಕರೂ ಆಗಿದ್ದಾರೆ. ಅವರ ಚಿತ್ರ ನಿರ್ಮಾಣದ ಸಂಸ್ಥೆ, ರಾಜ್‌ಕಮಲ್ ಇಂಟರ್‌ನ್ಯಾಷನಲ್‌ ಅವರ ಹಲವಾರು ಚಿತ್ರಗಳನ್ನು ನಿರ್ಮಿಸಿದೆ. ಬಾಲ ನಟನಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ ಮೇಲೆ, ೧೯೭೫ರ ಒಂದು ನಾಟಕಅಪೂರ್ವ ರಾಗಂಗಳ್‌ ನಲ್ಲಿ ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸಿದರು. ಅದರಲ್ಲಿ ಛಲಗಾರ ಯುವಕನಾಗಿದ್ದು ತನಗಿಂತ ವಯಸ್ಸಿನಲ್ಲಿ ಹಿರಿಯ ಹೆಂಗಸನ್ನು ಪ್ರೇಮಿಸುವ ಪಾತ್ರವಹಿಸಿದ್ದರು. ಅವರು ೧೯೮೨ರ ಮೂಂದ್ರಮ್ ಪಿರಾಯ್ ಚಲನಚಿತ್ರಕ್ಕಾಗಿ ತಮ್ಮ ಮೊದಲ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು. ಇದರಲ್ಲಿ ಆಮ್ನೇಶಿಯಾ ಖಾಯಿಲೆಗೆ ಒಳಗಾದ ಒಂದು ಮಗುವನ್ನು ನೋಡಿಕೊಳ್ಳುವ ಮುಗ್ಧ ಶಾಲೆಯ ಶಿಕ್ಷಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರು ವಿಶೇಷವಾಗಿ ಮಣಿರತ್ನಂರಗಾಡ್‌ಫಾದರೆಸ್ಕ್ನಾಯಗನ್ (೧೯೮೭) ಚಿತ್ರದ ಅದ್ಭುತ ಅಭಿನಯದಿಂದಾಗಿ ಗುರುತಿಸಲ್ಪಟ್ಟಿದ್ದಾರೆ, ಟೈಮ್ ಮ್ಯಾಗಜೀನ್‌ ಈ ಚಿತ್ರವನ್ನು ಎಲ್ಲಾ ಸಮಯದ ಅತ್ಯುತ್ತಮ ಚಿತ್ರಗಳಲ್ಲೊಂದು ಎಂದು ವರದಿ ಮಾಡಿದೆ. ಆ ಕಾಲದಿಂದಲೂ ಇವರು ಹಲವಾರು ಗಮನ ಸೆಳೆಯುವ ಪಾತ್ರಗಳಲ್ಲಿ ಅಭಿನಯಿಸುತ್ತಲೇ ಬಂದಿದ್ದಾರೆ. ಅವುಗಳೆಂದರೆ ತಮ್ಮದೇ ನಿರ್ಮಾಣದ ಹೇ ರಾಮ್ ಮತ್ತು ವಿರುಮಾಂಡಿ ಹಾಗು ಹತ್ತು ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ ದಶಾವತಾರಮ್ .

ಜೀವನ ಚರಿತ್ರೆ

ಭಾರತದ ತಮಿಳುನಾಡುರಾಜ್ಯದ ಪರಮಕುಡಿಯಲ್ಲಿ ಜನಿಸಿದರು. ಕಮಲ್ ಹಾಸನ್ ಅವರು ೪ -ವರ್ಷ-ವಯಸ್ಸಿನವರಿರುವಾಗಲೇ ಚಲನಚಿತ್ರ ಅಭಿನಯಕ್ಕೆ ಮೊದಲ ಬಾರಿಗೆ ಕಾಲಿಟ್ಟರು,೧೨ ಆಗಸ್ಟ್ ೧೯೫೯ರಲ್ಲಿ ಬಿಡುಗಡೆಯಾದ A. ಭೀಮ್ ಸಿಂಗ್ ನಿರ್ದೇಶನದ ಕಲತ್ತೂರ್ ಕಣ್ಣಮ್ಮ ಅವರ ಮೊದಲ ಚಿತ್ರವಾಗಿತ್ತು. ಅನುಭವಿ ತಮಿಳು ನಟ ಜೆಮಿನಿ ಗಣೇಶನ್ ಅವರ ಜೊತೆಯಲ್ಲಿ ಅಭಿನಯಿಸಿದ ಪಾತ್ರಕ್ಕೆ ಉತ್ತಮ ಬಾಲನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದರು.[೪] ನಂತರದಲ್ಲಿ ಬಾಲ ನಟನಾಗಿ ಐದು ಇತರೆ ತಮಿಳು ಚಲನಚಿತ್ರಗಳಲ್ಲಿ ಶಿವಾಜಿ ಗಣೇಶನ್ ಮತ್ತು ಎಮ್. ಜಿ. ರಾಮಚಂದ್ರನ್ ‌ರ ಜೊತೆ ಅಭಿನಯಿಸಿದರು. ನಂತರ ಒಂಭತ್ತು ವರ್ಷಗಳವರೆಗೆ ಇವರು ಚಿತ್ರರಂಗದಿಂದ ದೂರ ಉಳಿದು ವಿದ್ಯಾಭ್ಯಾಸ , ಕರಾಟೆ ಮತ್ತು ಭರತನಾಟ್ಯಂ ಕಲಿಯುವ ಕಡೆಗೆ ಗಮನ ಹರಿಸಿಸಿದರು, ಹಾಸನ್ ಅವರು ಹಿಂತಿರುಗಿದ ನಂತರ ೧೯೭೨ರಲ್ಲಿ ಕಡಿಮೆ ಖರ್ಚಿನ ಚಲನಚಿತ್ರಗಳಲ್ಲಿ ಸಹ ನಟನಾಗಿ ಅಭಿನಯಿಸಿದರು.ಸಿವಕುಮಾರ್ ಜೊತೆ ಸಹ-ನಟನಾಗಿ ಅಭಿನಯಿಸಿದ ಆರಂಗೇಟ್ರಮ್ ಮತ್ತು ಸೊಲ್ಲಾಥಾನ್ ನೈನಾಯ್‌ಕ್ಕಿರೆನ್ ಚಿತ್ರಗಳೂ ಕೂಡಾ ಈ ಚಿತ್ರಗಳಲ್ಲಿ ಸೇರಿವೆ. ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಮುನ್ನ ಸಹನಟನಾಗಿ ಅಭಿನಯಿಸಿದ ಕೊನೆಯ ಚಲನಚಿತ್ರ ನಾನ್ ಅವನಿಲ್ಲಾಯ್ .

ಪ್ರಶಸ್ತಿಗಳು ಮತ್ತು ಗೌರವಗಳು

ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹೊಂದಿರುವ ದಾಖಲೆ ಹೊಂದಿದ್ದಾರೆ, ಮೂರು ಉತ್ತಮ ನಟ ಪ್ರಶಸ್ತಿ ಹಾಗೂ ಒಂದು ಬಾಲನಟ ಪ್ರಶಸ್ತಿ.

  • ಅದರ ಜೊತೆಯಲ್ಲಿ, ಹಾಸನ್ ಅವರು ಹತ್ತೊಂಬತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದ ದಾಖಲೆ ಹೊಂದಿದ್ದರೆ – ಐದು ಭಾಷೆಗಳಲ್ಲಿ ಮತ್ತು ಅವರ ಇತ್ತೀಚಿನ ೨೦೦೦ರ ಪ್ರಶಸ್ತಿ ಪಡೆದ ನಂತರ ಸಂಸ್ಥೆಗೆ ತಮ್ಮನ್ನು ಮುಂದಿನ ಪ್ರಶಸ್ತಿಗಳಿಂದ ವಿಮುಕ್ತಿ ಕೊಡುವಂತೆ ಬರೆದಿದ್ದಾರೆ.

ಅವರನ್ನು ಗುರುತಿಸಿದ ಇತರೆ ಪ್ರಶಸ್ತಿಗಳೆಂದರೆ ತಮಿಳುನಾಡು ರಾಜ್ಯದ ಚಲನಚಿತ್ರ ಪ್ರಶಸ್ತಿಗಳುನಂದಿ ಪ್ರಶಸ್ತಿಗಳು ಮತ್ತು ವಿಜಯ್ ಪ್ರಶಸ್ತಿಗಳು , ಇದರಲ್ಲಿ ದಶಾವತಾರಂ ನಲ್ಲಿ ಕಾರ್ಯ ನಿರ್ವಹಿಸಿದಕ್ಕಾಗಿ ನಾಲ್ಕು ವಿವಿಧ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇವರಿಗೆ ೨೦೧೪ರ ಸಾಲಿನ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ರಾಜಕೀಯ ಪ್ರವೇಶ :

  • ಕಮಲ್‌ ಹಾಸನ್‌ ಮಕ್ಕಳ್‌ ನೀದಿ ಮೈಯಂ(ಎಂಎನ್‌ಎಂ) ಎಂಬ ಪಕ್ಷವನ್ನು ೧೯-೧೨-೨೦೧೮ ರಂದು ಸ್ಥಾಪಿಸಿದ್ದಾರೆ. ಮದುರೆಯಲ್ಲಿ ೧೯ರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಮಲ್‌ ಹಾಸನ್‌ ತಮ್ಮ ನೂತನ ಪಕ್ಷದ ಹೆಸರು ಮತ್ತು ಚಿಹ್ನೆ ಅನಾವರಣಗೊಳಿಸಿದರು. “ಮಕ್ಕಳ್‌ ನೀದಿ ಮೈಯಂ” “ಜನಕ್ಕಾಗಿ ನ್ಯಾಯ ಕೇಂದ್ರ” ಎನ್ನುವ ಅರ್ಥ ನೀಡುತ್ತದೆ.
  • ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.. ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಇದೇ ಮೊದಲ ಬಾರಿಗೆ ದೃಢಪಡಿಸಿದರು. ತಾವು ‘ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಕ್ತವಿರುವುದಾಗಿ ಪಕ್ಷದ ಕಾರ್ಯಕಾರಿಣಿ ಮತ್ತು ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಚೆನ್ನೈನಲ್ಲಿ ೨೨-೧೨-೨೦೧೮ ರಂದು ಹೇಳಿದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್