Tuesday, November 12, 2019 1:50 PM

ಮಾಂದಲ್ ಪಟ್ಟಿಗೆ ತೆರಳುವ ಜೀಪ್‍ಗಳ ದರ ವಿವರ
118
ಮಾಂದಲ್ ಪಟ್ಟಿಗೆ ತೆರಳುವ ಜೀಪ್‍ಗಳ ದರ ವಿವರ

ಮಡಿಕೇರಿ ನ.7 :
ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಮಾಂದಲ್ ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಎಂಟು ಆಸನ ಸಾಮಥ್ರ್ಯ ಮೀರದ ರಹದಾರಿ ಹೊಂದಿರುವ ಸಾರಿಗೆ ಜೀಪ್(ಹಳದಿ ಫಲಕ) ವಾಹನಗಳಿಗೆ ವಾಪಾಸ್ಸು ಪ್ರಯಾಣ ದರ ಸಹ ಒಳಗೊಂಡಂತೆ ಈ ಮುಂದಿನ ದರ ನಿಗದಿಪಡಿಸಲಾಗಿದ್ದು, ದರದ ವಿವರ ಇಂತಿದೆ.
ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್‍ಪಟ್ಟಿಯ ಪ್ರವೇಶ ದ್ವಾರದವರೆಗೆ ವಯಾ ರಾಜಾಸೀಟು-ಕೆ ನಿಡುಗಣೆ–ರೂ.800, ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್‍ಪಟ್ಟಿಯ ಪ್ರವೇಶ ದ್ವಾರದ ವರೆಗೆ ವಾಯ ರಾಜಸೀಟು-ಎಪ್.ಎಂ.ಕೆ.ಎಂ.ಸಿ. ಕಾಲೇಜು-ಕೋಳಿಗೂಡು-ಕಾಲೂರು ರೂ.800, ಮಾಂದಲ್ ಪಟ್ಟಿಯ ಪ್ರವೇಶ ದ್ವಾರದಿಂದ ಮಾಂದಲ್ ಪಟ್ಟಿಯ ಪ್ರೇಕ್ಷಣಿಯ ಸ್ಥಳದವರೆಗೆ ರೂ.300., ಮಡಿಕೇರಿ ಬಸ್ ನಿಲ್ದಾಣದಿಂದ ಅಬ್ಬಿಫಾಲ್ಸ ವರೆಗೆ ವಯಾ ರಾಜಾಸೀಟು-ಕೆ ನಿಡುಗಣೆ ರೂ.400. ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್‍ಪಟ್ಟಿಯ ಪ್ರವೇಶದ್ವಾರದ ವರೆಗೆ ವಯಾ ರಾಜಸೀಟು-ಕೆ,ನಿಡುಗಣೆ-ಅಬ್ಬಿಫಾಲ್ಸ್ ರೂ.1000. ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್ಪಟ್ಟಿಯ ಪ್ರೇಕ್ಷಣಿಯ ಸ್ಥಳದವರೆಗೆ ವಯಾ ರಾಜಸೀಟು-ಕೆ ನಿಡುಗಣೆ-ರೂ.1100, ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್ಪಟ್ಟಿ ಪ್ರೇಕ್ಷಣೀಯ ಸ್ಥಳದವರೆಗೆ ವಯಾ ರಾಜಾಸೀಟು-ಕೆ.ನಿಡುಗಣೆ-ಅಬ್ಬಿಫಾಲ್ಸ್-1300.
ಒಂದು ವೇಳೆ ಕಾನೂನು ಬಾಹಿರವಾಗಿ ವಾಹನಗಳ ಚಾಲಕರು/ ಮಾಲೀಕರು ದರ ವಸೂಲಿಸುವುದು ಅಥವಾ ದುರ್ನಡತೆ ಕಂಡುಬಂದಲ್ಲಿ ಮೋಟಾರು ವಾಹನ ಕಾಯ್ದೆಯಡಿ ನೋಂದಣಿ ಪುಸ್ತಕ ರದ್ದತಿ ಹಾಗೂ ಚಾಲಕರ ಲೈಸನ್ಸ್ ಅಮಾನತ್ತುಪಡಿಸಲು ಸೂಕ್ತ ಕಾನೂನು ಕ್ರಮವವನ್ನು ಜರುಗಿಸಲು ಪ್ರಾಧಿಕಾರದ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಲಾಗಿದೆ. ಈ ದರವು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್