Tuesday, November 12, 2019 1:51 PM

ಸಿಧುಗೆ ವೀಸಾ ನೀಡಿದ ಪಾಕ್
15
ಸಿಧುಗೆ ವೀಸಾ ನೀಡಿದ ಪಾಕ್

ಇಸ್ಲಾಮಾಬಾದ್ ನ.7 : ನವೆಂಬರ್ 9 ರಂದು ನಡೆಯಲಿರುವ ಸಿಖ್ಖರ ಧಾರ್ಮಿಕ ಕ್ಷೇತ್ರ ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಂಜಾಬ್ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ವೀಸಾ ನೀಡಿರುವುದಾಗಿ ಪಾಕಿಸ್ತಾನ ಇಂದು ತಿಳಿಸಿದೆ.
ಕರ್ತಾರ್ ಪುರ್ ಕಾರಿಡಾರ್ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಧು ಅವರನ್ನು ಇದೀಗ ಉದ್ಘಾಟನಾ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲು ಪಾಕಿಸ್ತಾನ ಆಹ್ವಾನಿಸಿದೆ. ತಮ್ಮ ಆಹ್ವಾನವನ್ನು ಸಿಧು ಒಪ್ಪಿಕೊಂಡಿರುವುದಾಗಿ ಆಡಳಿತಾ ರೂಢ ಪಕ್ಷದ ವಕ್ತಾರರು ತಿಳಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಬಾಬಾ ಗುರುನಾನಕ್ ಗುರುದ್ವಾರಕ್ಕೆ ಭೇಟಿ ನೀಡಲು ಭಾರತದ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಪಾಕಿಸ್ತಾನ ವೀಸಾ ನೀಡಿದೆ ಎಂದು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಶಾಸಕರಾಗಿರುವ ಸಿಧು, ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅನುಮತಿ ಕೋರಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್