Tuesday, November 12, 2019 2:40 PM

ತಹಶೀಲ್ದಾರ್ ನ್ನು ಹತ್ಯೆ ಮಾಡಿದವನ ಸಾವು
21
ತಹಶೀಲ್ದಾರ್ ನ್ನು ಹತ್ಯೆ ಮಾಡಿದವನ ಸಾವು

ಹೈದರಾಬಾದ್ ನ.7 : ಮಹಿಳಾ ತಹಶೀಲ್ದಾರ್ ಚಿ.ವಿಜಯಾ ರೆಡ್ಡಿ ಅವರಿಗೆ ಅವರ ಕಚೇರಿಯಲ್ಲೇ ಬೆಂಕಿ ಇಟ್ಟು ಸಜೀವ ದಹನ ಮಾಡಿದ್ದ ಆರೋಪಿ ಕುರಾ ಸುರೇಶ್ ಗುರುವಾರ ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ನಿಧನನಾಗಿದ್ದಾನೆ.
ಸುರೇಶ್ ಸೋಮವಾರ ಅಬ್ದುಲ್ಲಾಪುರಮೆಟ್ ನಲ್ಲಿನ ತಹಶೀಲ್ದಾರ್ ಕಚೇರಿಗೆ ತೆರಳಿ, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿದ್ದನು. ಆ ಬೆಂಕಿ ಕೆನ್ನಾಲಿಗೆಗೆ ಸಿಕ್ಕಿದ ಮಹಿಳಾ ಅಧಿಕಾರಿಯ ಚಾಲಕ ಗುರುನಾಥಮ್ ಸಹ ಸುಟ್ಟ ಗಾಯದೊಡನೆ ಆಸ್ಪತ್ರೆಗೆ ಸೇರಿದ್ದಲ್ಲದೆ ಅಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದನು.
ವಿಜಯಾ ರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು ಆರೋಪಿ ಸುರೇಶ್ ಸಹ ಶೇಕಡಾ 65 ಕ್ಕೂ ಹೆಚ್ಚು ಸುಟ್ಟಗಾಯಗಳಿಂದ ಬಳಲುತ್ತಿದ್ದು, ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಕಡೆಗೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ 3.30 ರ ಸುಮಾರಿಗೆ ಅಸುನೀಗಿದ್ದಾನೆ.
ರಂಗಾರೆಡ್ಡಿ ಜಿಲ್ಲೆಯ ಗೌರೆಲ್ಲಿ ಗ್ರಾಮದಲ್ಲಿ ತನ್ನ ಕುಟುಂಬದೊಂದಿಗೆ ಭೂ ವಿವಾದವನ್ನು ಹೊಂದಿದ್ದ ಸುರೇಶ್ ತಹಶೀಲ್ದಾರ್ ಅವರನ್ನು ಅದೇ ದ್ವೇಷದ ಹಿನ್ನೆಲೆಯಲ್ಲಿ ಸುಟ್ಟು ಹಾಕಿದ್ದ ಎಂದು ಶಂಕಿಸಲಾಗಿದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್