Tuesday, November 12, 2019 2:50 PM

ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಒಂದೆನಿಸಿದ ಇಡಗುಂಜಿ ವಿನಾಯಕ ದೇವಸ್ಥಾನ
90
ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಒಂದೆನಿಸಿದ ಇಡಗುಂಜಿ ವಿನಾಯಕ ದೇವಸ್ಥಾನ

ಉತ್ತರ ಕನ್ನಡ ಜಿಲ್ಲೆ ಹಲವಾರು ಪ್ರಾಕೃತಿಕ ವಿಸ್ಮಯಗಳಿಂದ ಪ್ರವಾಸಿಗರನ್ನು ಕೈಬೀಸಿಕರೆಯುವ ತಾಣವಾಗಿದೆ. ನಿಸರ್ಗ ಸೌಂದರ್ಯ, ಧಾರ್ಮಿಕ ಹಾಗೂ ಸಾಂಸ್ಕøತಿಕ ವೈಶಿಷ್ಟ್ಯದಿಂದ ಕರ್ನಾಟಕದ ಒಂದು ವಿಶಿಷ್ಟ ಕ್ಷೇತ್ರವಾಗಿದೆ. ಯಕ್ಷಗಾನದಂತಹ ಅತ್ಯಾಕರ್ಷಕ ಕಲಾ ಪ್ರಕಾರ, ಕನ್ನಡ ಭಾಷೆಯ ಶೈಲಿಯಿಂದಾಗಿ ಉತ್ತರ ಕನ್ನಡ ಎತ್ತರದಲ್ಲಿದೆ.
ತನ್ನ ಮಡಿಲಿನಲ್ಲಿ ಹಲವಾರು ಶಕ್ತಿದೇವತೆ ಹಾಗೂ ಮಹಿಮೆಯ ದೇವರ ಕ್ಷೇತ್ರಗಳನ್ನು ಒಳಗೊಂಡಿದೆ. ಅದರಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನ ಅತ್ಯಂತ ಶ್ರದ್ದಾ ಕೇಂದ್ರವಾಗಿದ್ದು ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ವಿನಾಯಕನ ಆರಾಧಕರಿಗಷ್ಟೆ ಅಲ್ಲದೆ ಸರ್ವರಿಗೂ ಸದ್ಭಕ್ತಿಯ ಸಂಪನ್ನತೆಯ ಸಾಕಾರ ಮೂರ್ತಿಯಾಗಿ ಜನರ ಮನದಲ್ಲಿ ನೆಲೆಸಿದ್ದಾನೆ.
ಏನಿದರ ವಿಶೇಷತೆ : ಕರ್ನಾಟಕದ ರಾಜ್ಯವೇ ಅತ್ಯಂತ ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಒಂದೆನಿಸಿದೆ. ಕರ್ನಾಟಕದ ಉದ್ದಗಲಕ್ಕೂ ಇರುವ ಇತಿಹಾಸ ಪ್ರಸಿದ್ಧ ದೇವಾನು ದೇವತೆಗಳ ಕ್ಷೇತ್ರದಿಂದ ಪುಣ್ಯಭೂಮಿಯಾಗಿದೆ. ಅದರಲ್ಲಿ ಸುಮಾರು 1500 ವರ್ಷಕ್ಕಿಂತಲೂ ಹೆಚ್ಚು ಪುರಾತನವಾದ ಇಡಗುಂಜಿ ವಿನಾಯಕ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ರಾ.ಹೆ. 17 ರಿಂದ 7 ಕಿ.ಮೀ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ನೆಲೆಸಿದ್ದಾನೆ.
ಮಹೋತಭಾರ ಶ್ರೀ ವಿನಾಯಕನೆಂದೇ ಕರೆಯಿಸಿಕೊಳ್ಳುವ ಗಣಪ ದೇವಸ್ಥಾನದಲ್ಲಿ ನಿಂತ ಮೂರ್ತಿಯ ರೂಪದಲ್ಲಿ ದರ್ಶನನೀಡುತ್ತಿದ್ದಾನೆ. ದ್ವಿ ಭುಜ ಭಂಗಿಯಲ್ಲಿ ನಿಂತಿರುವ ವಿನಾಕನ ವಿಗ್ರಹ ಸುಮಾರು 88 ಸೆಂ.ಮೀ. ಎತ್ತರ ಮತ್ತು 59 ಸೆಂ.ಮೀ. ಅಗಲ ಹೊಂದಿದೆ. ಈ ಮೂರ್ತಿಯ ಬಲಗೈಯಲ್ಲಿ ಕಮಲದ ಹೂ ಮತ್ತು ಎಡಗೈಯಲ್ಲಿ ಮೋದಕ ಹಿಡಿದಿರುವ ಅಪರೂಪದ ವಿಗ್ರಹದ ಬಳಿ ವಿಶೇಷವೆಂದರೆ ಗಣಪತಿಯ ವಾಹನ ಮೂಷಿಕ ಮಾತ್ರ ಇಲ್ಲಿಲ್ಲ.
ಇಷ್ಟಾರ್ಥ ಸಿದ್ಧಿ, ಹರಕೆ ಹೊತ್ತವರ ಇಷ್ಟ, ಕಷ್ಟಗಳನ್ನು ಅತೀ ಶೀಘ್ರವಾಗಿ ಈಡೇರಿಸುವ ವಿನಾಯಕ ಎಲ್ಲರ ನಂಬಿಕೆ ಪಾತ್ರನಾಗಿದ್ದಾನೆ.
ಭಕ್ತಪರಾಧೀನನಾಧ ವಿನಾಯಕನ ದರ್ಶನಕ್ಕಾಗಿ ಕ್ಷೇತ್ರಕ್ಕೆ ಪ್ರತಿ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅದರಲ್ಲಿಯೂ ಶ್ರೀ ವಿನಾಯಕನಿಗೆ ಇಷ್ಟವಾದ ಗಣ ಹೋಮ ನೆರವೇರಿಸುವ ಮೂಲಕ ಪ್ರಸನ್ನಗೊಳಿಸಿ, ತಮ್ಮ ಮನದಾಳದ ಪ್ರಾರ್ಥನೆ ಸಲ್ಲಿಸುತ್ತಾರೆ. ಹಾಗಾಗಿ ಇಲ್ಲಿಗೆ ಬರುವ ಭಕ್ತರ ಸಂತೃಪ್ತ ಭಾವವೇ ಕ್ಷೇತ್ರಕ್ಕೆ ಪ್ರಸಿದ್ದಿಗೂ ಕಾರಣವಾಗಿದೆ..
ಪ್ರಯಾಣ ಹೀಗಿರಲಿ: ಭಟ್ಕಳದಿಂದ 32 ಕಿ.ಮೀ. ಹಾಗೂ ಹೊನ್ನಾವರದಿಂದ 15 ಕಿ.ಮೀ. ದೂರವಿರುವ ಕ್ಷೇತ್ರಕ್ಕೆ ಎರಡೂ ಕಡೆಗಳಿಂದ ಸಾಕಷ್ಟು ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಅದರಲ್ಲಿಯೂ ಕೊಂಕಣ ರೈಲ್ವೆ ಮಾರ್ಗ ಇಲ್ಲಿಯೇ ಹಾದು ಹೋಗುವುದರಿಂದ ಪ್ರಯಾಣಕ್ಕೆ ಯಾವುದೇ ತೊಂದರೆ ಇಲ್ಲ.
ಇನ್ನು ಇಡಗುಂಜಿಗೆ ಸಮೀಪದಲ್ಲಿಯೇ ಮುರುಡೇಶ್ವರ, ಗೋಕರ್ಣ, ಅಪ್ಸರಕೊಂಡ, ಕಾಸರಗೋಡು ಸಮುದ್ರ ತೀರ, ಶರಾವತಿ ನದಿ, ರಾಮ ಮತ್ತು ಲಕ್ಷ್ಮಣ ತೀರ್ಥಗಳೂ ಸೇರಿದಂತೆ ಹಲವಾರು ಪ್ರೇಕ್ಷಣೀಯ ಸ್ಥಳಗಳಿರುವುದರಿಂದ ಸ್ವಂತ ವಾಹನದಲ್ಲಿ ಬಂದರೆ ಅವುಗಳನ್ನೂ ಸಂದರ್ಶಿಸಲು ಅನುಕೂಲ.  

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್