Tuesday, November 12, 2019 2:47 PM

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
61
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮಡಿಕೇರಿ ನ.08 : 2019-20ನೇ ಸಾಲಿನ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ (ssp.postmatric.karnataka.gov.in) ನಲ್ಲಿ ಅರ್ಜಿ ಸಲ್ಲಿಸಲು ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ ಮತ್ತು ಪ.ವರ್ಗಗಳ ವಿದ್ಯಾರ್ಥಿಗಳು ನವೆಂಬರ್, 30 ರೊಳಗೆ ದಾಖಲಾತಿಗಳೊಂದಿಗೆ ವೆಬ್ ಸೈಟ್‍ನಲ್ಲಿ ಅರ್ಜಿ ಸಲ್ಲಿಸಲು ಕೋರಿದೆ.
ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ (ಆದಾಯ ಮಿತಿ 2.50 ಲಕ್ಷ), ವಿದ್ಯಾರ್ಥಿಯ ಬ್ಯಾಂಕ್ ಪುಸ್ತಕದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (ಕಡ್ಡಾಯ), ಹಿಂದಿನ ವರ್ಷದ ಮಾಕ್ರ್ಸ್ ಕಾರ್ಡ್ ಪ್ರತಿ, ಇತ್ತೀಚಿನ ಭಾವ ಚಿತ್ರ, ಆದಾಯ ಮಿತಿ 2.50 ಲಕ್ಷ ಕ್ಕಿಂತ ಹೆಚ್ಚು 10.00 ಲಕ್ಷ ರೂ ಒಳಗಿರುವ ಸಿ.ಇ.ಟಿ ಮೂಲಕ ಎಂಬಿ.ಬಿ.ಎಸ್., ಬಿ.ಡಿ.ಎಸ್., ಬಿ.ಇ, ಬಿ.ಟೆಕ್, ಬಿ.ಆರ್ಕ್ ಕೋರ್ಸ್‍ಗಳಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ಮಾತ್ರ ಸರ್ಕಾರಿ/ಅನುದಾನಿತ/ಅನುದಾನ ರಹಿತ/ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯದ ಕಾಲೇಜು/ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಶೇ.100% ರಷ್ಟು ಆಯಾ ಸಂಸ್ಥೆಗಳಿಗೆ ನಿಗಧಿ ಪಡಿಸಿದ ಶುಲ್ಕ ಪಡೆಯಲು ಅರ್ಹರಿರುತ್ತಾರೆ.
ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ (ssp.postmatric.karnataka.gov.in), ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080-44554455, ಮತ್ತು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ರವರ ಕಚೇರಿ ದೂ.ಸಂ. 9480843156/08276-281115 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್